ಮಳೆಯಿಂದಾಗಿ ಓವರುಗಳನ್ನು 15ಕ್ಕೆ ಮೊಟಕುಗೊಳಿಸಲಾಯಿತು. ಕಿಂಗ್ಸ್ ಇಲೆವನ್ ಬೌಲರುಗಳನ್ನು ಮನಬಂದಂತೆ ದಂಡಿಸಿ ಬೌಂಡರಿ, ಸಿಕ್ಸರುಗಳ ಸುರಿಮಳೆಯನ್ನು ಕ್ರಿಸ್ ಗೇಲ್ ಮತ್ತು ಕೊಹ್ಲಿ ಸುರಿಸಿದರು. ವಿರಾಟ್ ಕೊಹ್ಲಿ ಕೇವಲ 50 ಎಸೆತಗಳಲ್ಲಿ 8 ಸಿಕ್ಸರುಗಳು ಮತ್ತು 12 ಬೌಂಡರಿಗಳ 113 ರನ್ ಸ್ಕೋರ್ ಮಾಡಿದರೆ , ಕ್ರಿಸ್ ಗೇಲ್ 32 ಎಸೆತಗಳಲ್ಲಿ 73 ರನ್ ಸ್ಕೋರ್ ಮಾಡಿದರು.