ಶಾಪಿಂಗ್ ಗೆ ಬಂದಾಗ ಫ್ಯಾನ್ಸ್ ಮುತ್ತಿಗೆ: ಪತ್ನಿ ರಿತಿಕಾ ರಕ್ಷಣೆಗೆ ನಿಂತ ರೋಹಿತ್ ಶರ್ಮಾ
ರೋಹಿತ್ ತಮ್ಮ ಪತ್ನಿ ರಿತಿಕಾ ಜೊತೆ ಮುಂಬೈನ ಆಡಿಡಾಸ್ ಸ್ಟೋರ್ ಗೆ ಶಾಪಿಂಗ್ ಗೆ ಬಂದಿದ್ದಾರೆ. ಈ ವೇಳೆ ರೋಹಿತ್ ರನ್ನು ನೋಡಲು ಸಾಕಷ್ಟು ಜನ ಜಮಾಯಿಸಿದ್ದರು.
ಜನ ಮುತ್ತಿಕೊಂಡಾಗ ರೋಹಿತ್ ಪತ್ನಿ ರಿತಿಕಾಗೆ ಇರಿಸುಮುರಿಸಾಗಿದೆ. ಈ ವೇಳೆ ತಮ್ಮದೇ ಶೈಲಿಯಲ್ಲಿ ಫ್ಯಾನ್ಸ್ ಗೆ ಆವಾಜ್ ಹಾಕಿದ ರೋಹಿತ್ ಪತ್ನಿಯನ್ನು ಸುರಕ್ಷಿತವಾಗಿ ಕಾರಿನಲ್ಲಿ ಕುಳ್ಳಿರಿಸಿ ಕರೆದೊಯ್ದಿದ್ದಾರೆ.