ಲಂಡನ್ ಬೀದಿಯಲ್ಲಿ ವಿರಾಟ್ ಕೊಹ್ಲಿ: ಇಲ್ಲಿನ ಹಾಗಿರಲ್ಲ ಕೊಹ್ಲಿ ಅಲ್ಲಿ (Video)
ಭಾರತದಲ್ಲಿ ವಿರಾಟ್ ಕೊಹ್ಲಿ ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಸೆಲ್ಫೀಗಾಗಿ ಮುತ್ತಿಕೊಳ್ಳುತ್ತಾರೆ. ಅವರು ಎಲ್ಲೇ ಹೋದರೂ ಕ್ಯಾಮರಾ ಕಣ್ಣುಗಳು ಹಿಂಬಾಲಿಸುತ್ತವೆ. ಆದರೆ ಲಂಡನ್ ನಲ್ಲಿ ವಿರಾಟ್ ಕೊಹ್ಲಿ ಇದೆಲ್ಲವನ್ನೂ ಮೀರಿ ತಮ್ಮ ಸಾಮಾನ್ಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.
ಹಲವು ಬಾರಿ ಕೊಹ್ಲಿ ಸಾಮಾನ್ಯರಂತೇ ಲಂಡನ್ ಬೀದಿಯಲ್ಲಿ ಸುತ್ತಾಡುತ್ತಿರುವುದು ಕಂಡುಬಂದಿತ್ತು. ಶಾಪಿಂಗ್ ಮಾಲ್ ಗಳಿಗೆ ತೆರಳಿ ಸಾಮಾನ್ಯರಂತೇ ಶಾಪಿಂಗ್ ಮಾಡುವ ವಿಡಿಯೋಗಳು ವೈರಲ್ ಆಗಿತ್ತು. ಭಾರತದಲ್ಲಿ ಸಿಗದ ಏಕಾಂತ, ಸ್ವಾತಂತ್ರ್ಯವನ್ನು ಕೊಹ್ಲಿ ಲಂಡನ್ ನಲ್ಲಿ ಪಡೆಯುತ್ತಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಕೊಹ್ಲಿ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಲಂಡನ್ ನಲ್ಲಿಯೇ ಸೆಟಲ್ ಆಗಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಮುಗಿದ ಬೆನ್ನಲ್ಲೇ ಕೊಹ್ಲಿ ಭಾರತಕ್ಕೆ ಬಾರದೇ ಲಂಡನ್ ವಿಮಾನವೇರಿದ್ದರು. ಮುಂದಿನ ದಿನಗಳಲ್ಲಿ ಕೊಹ್ಲಿ ತಮ್ಮ ಸಂಸಾರ ಸಮೇತ ಲಂಡನ್ ನಲ್ಲಿಯೇ ನೆಲೆಸಲಿದ್ದಾರೆ ಎನ್ನಲಾಗಿದೆ.