ಎದುರಾಳಿ ಕೆಣಕಿದರೂ ಮೊದಲ ಬಾರಿಗೆ ಸಿಟ್ಟುಗೊಳ್ಳದ ವಿರಾಟ್ ಕೊಹ್ಲಿ

Krishnaveni K

ಸೋಮವಾರ, 13 ಮೇ 2024 (11:02 IST)
Photo Courtesy: Twitter
ಬೆಂಗಳೂರು: ಸಾಮಾನ್ಯವಾಗಿ ತಮ್ಮನ್ನು ಕೆಣಕಲು ಬಂದವರನ್ನು ವಿರಾಟ್ ಕೊಹ್ಲಿ ಸುಮ್ಮನೇ ಬಿಡುವವರೇ ಅಲ್ಲ. ಅವರದ್ದೇ ಶೈಲಿಯಲ್ಲಿ ಪ್ರತ್ಯುತ್ತರ ಕೊಡುತ್ತಾರೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಎದುರಾಳಿ ತಂಡದ ಆಟಗಾರ ಕೆಣಕಿದರೂ ನಗುತ್ತಲೇ ಪೆವಿಲಿಯನ್ ಗೆ ತೆರಳಿದ್ದಾರೆ. ಇದಕ್ಕೆ ಕಾರಣವೂ ಇದೆ.

 ನಿನ್ನೆಯ ಪಂದ್ಯದಲ್ಲಿ ಕೊಹ್ಲಿ 12 ಎಸೆತಗಳಿಂದ 27 ರನ್ ಗಳಿಸಿ ವಿಕೆಟ್ ಕೀಪರ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ವಿಕೆಟ್ ಪಡೆದಿದ್ದು ಡೆಲ್ಲಿ ಹಿರಿಯ ವೇಗಿ ಇಶಾಂತ್ ಶರ್ಮಾ. ಔಟಾಗಿ ಕೊಹ್ಲಿ ಪೆವಿಲಿಯನ್ ಗೆ ಹೆಜ್ಜೆ ಹಾಕುತ್ತಿರುವಾಗ ಇಶಾಂತ್ ಬೇಕೆಂದೇ ಕೊಹ್ಲಿಗೆ ಅಡ್ಡ ನಿಂತು ಕೀಟಲೆ ಮಾಡಿದರು.

ಸಾಮಾನ್ಯವಾಗಿ ಕೊಹ್ಲಿ ಎದುರಾಳಿ ಆಟಗಾರರ ತಮಾಷೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಡೆಲ್ಲಿಯವರೇ ಆದ ಇಶಾಂತ್ ಜೊತೆಗೆ ಕೊಹ್ಲಿಗೆ ಉತ್ತಮ ಸ್ನೇಹ ಸಂಬಂಧವಿದೆ. ಇದೇ ಕಾರಣಕ್ಕೆ ಇಶಾಂತ್ ಪೆವಿಲಿಯನ್ ಗೆ ಹೋಗುತ್ತಿದ್ದ ಕೊಹ್ಲಿಗೆ ಅಡ್ಡ ನಿಂತು ಕೀಟಲೆ ಮಾಡಿದ್ದಾರೆ.

ಗೆಳೆಯನ ಕೀಟಲೆಗೆ ಕೊಹ್ಲಿ ಕೂಡಾ ನಗುತ್ತಲೇ ಪ್ರತಿಕ್ರಿಯೆ ನೀಡಿ ಪೆವಿಲಿಯನ್ ಗೆ ತೆರಳಿದ್ದಾರೆ. ಬಹುಶಃ ಇಶಾಂತ್ ಜಾಗದಲ್ಲಿ ಬೇರೆ ಯಾರೇ ಈ ರೀತಿ ಕೀಟಲೆ ಮಾಡಿದ್ದರೆ ಅವರಿಗೆ ಅಂತಹದ್ದೇ ಪ್ರತ್ಯುತ್ತರ ಸಿಗುತ್ತಿತ್ತು. ಆದರೆ ಇಶಾಂತ್ ಮೇಲೆ ಕೊಹ್ಲಿಗೆ ಅಷ್ಟು ಗೌರವವಿದೆ. ಇಬ್ಬರೂ ಡೆಲ್ಲಿ ಪರ ತಮ್ಮ ವೃತ್ತಿ ಜೀವನದ ಆರಂಭದಿಂದಲೂ ಜೊತೆಯಾಗಿ ಆಡುತ್ತಾ ಬಂದವರು. ಬಳಿಕ ಟೀಂ ಇಂಡಿಯಾದಲ್ಲಿ ಉತ್ತಮ ಗೆಳೆಯರಾಗಿದ್ದರು. ಹೀಗಾಗಿ ಈ ಗೆಳೆತನದ ಸಲುಗೆ ಮೈದಾನದಲ್ಲಿ ಕಂಡುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ