ಆಸ್ಟ್ರೇಲಿಯಾ ಆಟಗಾರರಿಗೆ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ

ಮಂಗಳವಾರ, 14 ಮಾರ್ಚ್ 2023 (10:58 IST)
Photo Courtesy: Twitter
ಅಹಮ್ಮದಾಬಾದ್: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ಬಳಿಕ ಟೀಂ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿ ಗಿಫ್ಟ್ ಕೊಟ್ಟಿದ್ದಾರೆ.

ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಆಸೀಸ್ ಆಟಗಾರರ ಬಳಿ ತೆರಳಿ ಉಸ್ಮಾನ್ ಖವಾಜ ಮತ್ತು ಅಲೆಕ್ಸ್ ಕ್ಯಾರಿಗೆ ಉಡುಗೊರೆ ನೀಡಿದ್ದಾರೆ.

ತಮ್ಮ ಜೆರ್ಸಿಗೆ ಸಹಿ ಹಾಕಿ ಕೊಹ್ಲಿ ಇಬ್ಬರಿಗೂ ಉಡುಗೊರೆ ನೀಡಿದ್ದಾರೆ.  ಉಸ್ಮಾನ್ ಖವಾಜ ಈ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಆದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠರಾಗಿದ್ದರು. ಆದರೆ ಪಂದ್ಯದ ಬಳಿಕ ತಮ್ಮ ಆಪ್ತ ಆಟಗಾರರಿಗೆ ಉಡುಗೊರೆ ನೀಡಿ ಖುಷಿಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ