ಪಾಕ್ ನಾಯಕ ಬಾಬರ್ ಅಜಮ್ ಗೆ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ

ಭಾನುವಾರ, 15 ಅಕ್ಟೋಬರ್ 2023 (09:30 IST)
Photo Courtesy: Twitter
ಅಹಮ್ಮದಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್ ಪಂದ್ಯದ ಬಳಿಕ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪಾಕ್ ನಾಯಕ ಬಾಬರ್ ಅಜಮ್ ಗೆ ಉಡುಗೊರೆಯೊಂದನ್ನು ನೀಡಿದ್ದಾರೆ.

ಪಾಕ್ ನಾಯಕ ಬಾಬರ್ ಅಜಮ್ ಗೆ ಕೊಹ್ಲಿ ಸಹಿ ಮಾಡಿದ ಟೀಂ ಇಂಡಿಯಾ ಜೆರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಸ್ನೇಹದ ಸಂಕೇತವಾಗಿ ಕೊಹ್ಲಿ ಉಡುಗೊರೆ ನೀಡಿದ್ದಾರೆ.

ಕಳೆದ ಬಾರಿ ಏಷ್ಯಾ ಕಪ್ ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗಲೂ ಕೊಹ್ಲಿ ಬಾಬರ್ ಅಜಮ್ ಸೇರಿದಂತೆ ಪಾಕ್ ಆಟಗಾರರ ಬಳಿ ತೆರಳಿ ಉಭಯ ಕುಶಲೋಪರಿ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ