ಸೌರವ್ ಗಂಗೂಲಿಯನ್ನು ಹಿಂದಿಕ್ಕಿದ ವಿರಾಟ್..

ಬುಧವಾರ, 22 ಆಗಸ್ಟ್ 2018 (16:43 IST)
ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿರುವ ವಿರಾಟ್ ಕೊಹ್ಲಿ ಕ್ರಿಕೆಟ್‌ನಲ್ಲಿ ತಮ್ಮ ಅಮೋಘ ಫಾರ್ಮ ಅನ್ನು ಮುಂದುವರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಉತ್ತಮ ನಾಯಕನಾಗಲು ವಿರಾಟ್ ಸೌರವ್ ಗಂಗೂಲಿಯನ್ನು ಹಿಂದಿಕ್ಕಿದ್ದಾರೆ.

ಇಂಗ್ಲೆಂಡ್ ವಿರುದ್ಧ ಈಗ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಟ್ರೆಂಟ್ ಬ್ರಿಡ್ಜ್‌ನಲ್ಲಿ ಭಾರತ ಇಂದು ಗೆದ್ದು ಸರಣಿಯಲ್ಲಿ 2-1 ರ ಅಂತರದಲ್ಲಿದ್ದು ಗೆಲುವಿನ ಆಸೆಯನ್ನು ಉಳಿಸಿಕೊಂಡಿದೆ. ಈ ಟೆಸ್ಟ್ ಸರಣಿಯಲ್ಲಿ ವಿರಾಟ್ ಅನೇಕ ರೆಕಾರ್ಡ್‌ಗಳನ್ನು ಮಾಡುತ್ತಿದ್ದು ಅವುಗಳಲ್ಲಿ ಇದೂ ಒಂದಾಗಿದೆ.
 
ಕೊಹ್ಲಿ ಟೆಸ್ಟ್ ಕ್ರಿಕೆಟ್ ನಾಯಕನಾಗಿ 38 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇವುಗಳಲ್ಲಿ ಕೊಹ್ಲಿ ತಂಡ ಆಡಿದ 38 ಪಂದ್ಯಗಳಲ್ಲಿ 22 ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ. ಸೌರವ್ ಗಂಗೂಲಿ ಗೆದ್ದ 21 ಪಂದ್ಯಗಳಲ್ಲಿ 11 ಪಂದ್ಯಗಳು ವಿದೇಶಿ ನೆಲದಲ್ಲಿ ದಾಖಲಾಗಿರುವುದು ವಿಶೇಷ. ಮಾಜಿ ಕಫ್ತಾನ ಧೋನಿ 60 ಪಂದ್ಯಗಳಲ್ಲಿ 27 ಪಂದ್ಯಗಳಲ್ಲಿ ಜಯಿಸಿದ್ದು ಪ್ರಸ್ತುತ ಮೊದಲನೇ ಸ್ಥಾನದಲ್ಲಿದ್ದಾರೆ. ಆದರೆ ಕೊಹ್ಲಿ ಸಧ್ಯದಲ್ಲೇ ಮೊದಲ ಸ್ಥಾನಕ್ಕೆ ಬರಲಿದ್ದಾರೆ ಎಂಬುದು ಹಲವು ಪರಿಣಿತರ ಲೆಕ್ಕಾಚಾರವಾಗಿದೆ.
 
ಪ್ರಸ್ತುತ ಕೊಹ್ಲಿ ತಮ್ಮ ಬ್ಯಾಟಿಂಗ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿ ಮುಂದುವರಿಯುತ್ತಿದ್ದು 23 ನೇ ಟೆಸ್ಟ್ ಶತಕವನ್ನು ಭಾರಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಅಜುರುದ್ದೀನ್ ಅವರ 426 ರನ್‌ಗಳನ್ನು ದಾಟಿ ಅಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಕೊಹ್ಲಿಯ ಈ ಅಮೋಘ ಫಾರ್ಮ್ ಹೀಗೇ ಮುಂದುವರಿಯುತ್ತಿರಲಿ ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ