ವಿರಾಟ್ ಕೊಹ್ಲಿಯನ್ನು ನೋಡಿ ಇಂಗ್ಲೆಂಡ್ ಕೋಚ್ ಬಾಯಲ್ಲಿ ಇದೆಂಥಾ ಮಾತು ಬಂತು ನೋಡಿ!
ಅವರ ಈ ಅದ್ಭುತ ಇನಿಂಗ್ಸ್ ನೋಡಿ ಇಂಗ್ಲೆಂಡ್ ಸಹಾಯಕ ಕೋಚ್ ಪಾಲ್ ಫಾರ್ ಬ್ರೇಸ್ ದಂಗಾಗಿ ಹೋಗಿದ್ದಾರೆ. ಇಂತಹ ಛಲವುಳ್ಳ ಆಟಗಾರನ ನೋಡಿ ಇಂಗ್ಲೆಂಡ್ ಆಟಗಾರರು ಪಾಠ ಕಲಿಯಬೇಕಿದೆ ಎಂದು ಪಾಲ್ ಅಭಿಪ್ರಾಯಪಟ್ಟಿದ್ದಾರೆ.
‘ಆತನ ಶ್ರೇಷ್ಠತೆ ಬಗ್ಗೆ ಎಷ್ಟೇ ಚರ್ಚೆಗಳು ನಡೆಯಬಹುದು. ಆದರೆ ಆತ ಬೆಳೆದು ಬಂದ ರೀತಿ, ಈ ಸರಣಿಯಲ್ಲಿ ಸುಧಾರಣೆ ಕಾಣುತ್ತಾ ಹೋದ ರೀತಿ, ತಾಂತ್ರಿಕತೆ ಎಲ್ಲದರಿಂದ ನಾವು ಪಾಠ ಕಲಿಯಬೇಕಿದೆ’ ಎಂದು ಪಾಲ್ ಟೀಂ ಇಂಡಿಯಾ ನಾಯಕನನ್ನು ಹೊಗಳಿದ್ದಾರೆ.