ವಾಟರ್ ಬಾಯ್ ಆಗಿ ಕಿಂಗ್ ಕೊಹ್ಲಿ ಫನ್: ವೀಕ್ಷಕರಿಗೆ ಫುಲ್ ಎಂಟರ್ ಟೈನ್ ಮೆಂಟ್!

ಶುಕ್ರವಾರ, 15 ಸೆಪ್ಟಂಬರ್ 2023 (16:21 IST)
Photo Courtesy: Twitter
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ನ ಇಂದಿನ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಪಂದ್ಯವಾಡುತ್ತಿದೆ.

ಇಂದಿನ ಪಂದ್ಯಕ್ಕೆ ಅಷ್ಟೊಂದು ಮಹತ್ವವಿಲ್ಲದಿರುವುದರಿಂದ ಟೀಂ ಇಂಡಿಯಾ ಪ್ರಮುಖರಿಗೆ ವಿಶ್ರಾಂತಿ ನೀಡಿದೆ. ಅದರಂತೆ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಅವರು ಬ್ಯಾಟಿಂಗ್ ಮಾಡುವುದನ್ನು ನೋಡಲಾಗುವುದಿಲ್ಲ ಎಂದು ಬೇಸರಿಸಿಕೊಳ್ಳುವವರು ಇರಬಹುದು.

ಆದರೆ ಕೊಹ್ಲಿ ವೀಕ್ಷಕರಿಗೆ ಮನರಂಜನೆ ಒದಗಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ವಾಟರ್ ಬಾಯ್ ಆಗಿ ಮೈದಾನದಲ್ಲಿರುವ ಆಟಗಾರರಿಗೆ ಕೊಹ್ಲಿ ಇಂದು ನೀರು ಸರಬರಾಜು ಮಾಡುತ್ತಿದ್ದಾರೆ. ಬ್ರೇಕ್ ವೇಳೆ ತೀರಾ ಮಕ್ಕಳಂತೆ ಓಡಿಕೊಂಡು ಬಂದು ಎಲ್ಲರಿಗೂ ಭರ್ಜರಿ ಎಂಟರ್ ಟೈನ್ ಮೆಂಟ್ ಒದಗಿಸಿದ್ದಾರೆ. ಕೊಹ್ಲಿ ಫನ್ನಿಯಾಗಿ ಓಡಿಕೊಂಡು ಬರುವ ವಿಡಿಯೋ ನೋಡಿದ ನೆಟ್ಟಿಗರು ಕೊಹ್ಲಿಯನ್ನು ಆಡುವ ಬಳಗದಿಂದ ಹೊರಗಿಟ್ಟರೂ ಅವರನ್ನು ಕಡೆಗಣಿಸುವಂತಿಲ್ಲ. ಕೊಹ್ಲಿ ಬೆಸ್ಟ್ ಆಕ್ಟರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ