ಅಭ್ಯಾಸ ಶುರು ಮಾಡಿದ ಶ್ರೇಯಸ್ ಅಯ್ಯರ್: ಇಂದು ಕಣಕ್ಕೆ?

ಶುಕ್ರವಾರ, 15 ಸೆಪ್ಟಂಬರ್ 2023 (09:40 IST)
ಕೊಲೊಂಬೊ: ಮತ್ತೆ ಬೆನ್ನು ನೋವಿಗೊಳಗಾಗಿದ್ದ ಟೀಂ ಇಂಡಿಯಾ ಬ್ಯಾಟಿಗ ಶ್ರೇಯಸ್ ಅಯ್ಯರ್ ಏಷ್ಯಾ ಕಪ್ ಟೂರ್ನಿಗೆ ಆಯ್ಕೆಯಾಗಿದ್ದರೂ ಕಳೆದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ.

ಮೊದಲ ಎರಡು ಪಂದ್ಯವಾಡಿದ ಬಳಿಕ ಶ್ರೇಯಸ್ ಮತ್ತೆ ಬೆನ್ನು ನೋವಿಗೊಳಗಾಗಿದ್ದರು. ಹೀಗಾಗಿ ಆಡುವ ಬಳಗದಿಂದ ಹೊರಬಿದ್ದಿದ್ದರು. ಇದೀಗ ಚೇತರಿಸಿಕೊಂಡಿರುವ ಅವರು ಮತ್ತೆ ತಂಡಕ್ಕೆ ಪುನರಾಗಮನ ಮಾಡುವ ಸೂಚನೆ ನೀಡಿದ್ದಾರೆ.

ನಿನ್ನೆ ತಂಡದ ಜೊತೆ ನೆಟ್ ಪ್ರಾಕ್ಟೀಸ್ ವೇಳೆ ಬ್ಯಾಟಿಂಗ್ ಅಭ್ಯಾಸ ಮಾಡುವುದು ಕಂಡುಬಂದಿದೆ. ಇಂದು ಬಾಂಗ್ಲಾದೇಶ ವಿರುದ್ಧ ಔಪಚಾರಿಕ ಪಂದ್ಯವಾಗಿದ್ದು, ಪ್ರಮುಖರಿಗೆ ವಿಶ್ರಾಂತಿ ನೀಡುವ ಸಾಧ‍್ಯತೆಯಿದೆ. ಹೀಗಾಗಿ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಮುಂತಾದ ಆಟಗಾರರು ಆಡುವ ಬಳಗದಲ್ಲಿ ಅವಕಾಶ ಪಡೆಯುವ ಸಾ‍ಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ