ಇಂಗ್ಲೆಂಡ್ ಟೆಸ್ಟ್ ಗೆ ವಿರಾಟ್ ಕೊಹ್ಲಿ ಹೋಟೆಲ್ ಕೋಣೆಯೊಳಗೇ ಅಭ್ಯಾಸ
ಶನಿವಾರ, 30 ಜನವರಿ 2021 (09:20 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಫೆಬ್ರವರಿ 5 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಚೆನ್ನೈಗೆ ಬಂದಿಳಿದಿದ್ದು, ಹೋಟೆಲ್ ಕೊಠಡಿಯೊಳಗೇ ವರ್ಕೌಟ್ ಮಾಡುತ್ತಿದ್ದಾರೆ.
ಚೆನ್ನೈಗೆ ಬಂದಿಳಿದಿರುವ ಕ್ರಿಕೆಟಿಗರು ಸದ್ಯಕ್ಕೆ ಕ್ವಾರಂಟೈನ್ ನಲ್ಲಿದ್ದಾರೆ. ಕಳೆದ ಮೂರು ವಾರಗಳಿಂದ ಕ್ರಿಕೆಟ್ ನಿಂದ ದೂರವಿದ್ದ ಕೊಹ್ಲಿ ಈಗ ಕ್ವಾರಂಟೈನ್ ಅವಧಿಯಲ್ಲಿ ವರ್ಕೌಟ್ ಮಾಡಿ ಮುಂದಿನ ಪಂದ್ಯಕ್ಕೆ ತಯಾರಾಗುತ್ತಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ನೆಟ್ ಪ್ರಾಕ್ಟೀಸ್ ಆರಂಭಿಸಲಿದ್ದಾರೆ.