ರಿಷಬ್ ಪಂತ್ ಮಾಡಿದ ಆ ಒಂದು ತಪ್ಪು ಟೀಂ ಇಂಡಿಯಾಕ್ಕೆ ಎಷ್ಟು ದುಬಾರಿಯಾಯಿತು ಗೊತ್ತಾ?!

ಬುಧವಾರ, 22 ಆಗಸ್ಟ್ 2018 (08:53 IST)
ಟ್ರೆಂಟ್  ಬ್ರಿಡ್ಜ್: ಇದೇ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ರಿಷಬ್ ಪಂತ್ ಮೊದಲ ಎರಡು ದಿನ ಬ್ಯಾಟಿಂಗ್, ಕೀಪಿಂಗ್ ಮೂಲಕವೇ ಸದ್ದು ಮಾಡಿದ್ದರು. ಆದರೆ ಆ ಖ್ಯಾತಿಯನ್ನು ಅವರು ನಿನ್ನೆ ಮಾಡಿದ ಒಂದೇ ತಪ್ಪಿನಿಂದ ಕಳೆದುಕೊಂಡರು.

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ನಿನ್ನೆಯ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದೆ. ಅಂದರೆ ಅದು ಕೇವಲ 1 ವಿಕೆಟ್ ನಿಂದ 210 ರನ್ ಗಳಿಸಬೇಕಿದೆ. ಇದು ಅಸಾಧ್ಯವೇ ಸರಿ.

ಆದರೆ ಭಾರತಕ್ಕೆ ಬೇಕಿದ್ದಿದ್ದು ಒಂದೇ ವಿಕೆಟ್. ಆ ಒಂದು ವಿಕೆಟ್ ಗಾಗಿ ಇಂದು ಆಟಗಾರರು ಮೈದಾನಕ್ಕಿಳಿಯಬೇಕಾಗಿದೆ. ಅಂತಹ ಪರಿಸ್ಥಿತಿ ಬರಲು ರಿಷಬ್ ಪಂತ್ ಮಾಡಿದ ಎಡವಟ್ಟು ಕಾರಣವಾಯಿತು.

ಇಂಗ್ಲೆಂಡ್ ಮೊದಲ ನಾಲ್ಕು ವಿಕೆಟ್ ಗಳನ್ನು ಬೇಗನೇ ಕಳೆದುಕೊಂಡಿತ್ತು. ಆದರೆ ಇದರ ಬಳಿಕ ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಜೋಡಿ ಸತತ ನಾಲ್ಕು ಗಂಟೆಗಳ ಬ್ಯಾಟಿಂಗ್ ಮಾಡಿ 169 ರನ್ ಗಳ ಜತೆಯಾಟವಾಡಿತು. ಈ ಜತೆಯಾಟವನ್ನು ಮುರಿದಿದ್ದು ಜಸ್ಪ್ರೀತ್ ಬುಮ್ರಾ. ಅವರು ಈ ಇನಿಂಗ್ಸ್ ನಲ್ಲಿ ಈಗಾಗಲೇ 5 ವಿಕೆಟ್ ಪಡೆದಿದ್ದಾರೆ. ಬಟ್ಲರ್ ಸ್ಮರಣೀಯ (106) ಶತಕವನ್ನೂ ಗಳಿಸಿದರು. ಆದರೆ ಬಟ್ಲರ್ 1 ರನ್ ಗಳಿಸಿದ್ದಾಗ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಕ್ಯಾಚ್ ಕೈ ಚೆಲ್ಲಿದ್ದರು. ಇದರಿಂದಾಗಿಯೇ ಬಟ್ಲರ್ ಇನಿಂಗ್ಸ್ ಬೆಳೆಸಿದರು. ಒಂದು ವೇಳೆ ಆಗಲೇ ಬಟ್ಲರ್ ಕ್ಯಾಚ್ ಹಿಡಿಯಲು ರಿಷಬ್ ಸಫಲರಾಗಿದ್ದರೆ ಟೀಂ ಇಂಡಿಯಾ ನಿನ್ನೆಯೇ ಗೆಲುವು ಕಾಣುತ್ತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ