ಆರ್‌ಸಿಬಿಗೆ ಕ್ರಿಸ್ ಗೇಲ್, ಸರ್ಫ್ರಾಜ್ ಖಾನ್ ಆಡ್ತಿಲ್ಲವೇಕೆ: ಕೊಹ್ಲಿ ಬಹಿರಂಗ

ಸೋಮವಾರ, 9 ಮೇ 2016 (17:27 IST)
ಕ್ರಿಸ್ ಗೇಲ್ ಅವರಂತ ಟಿ 20 ಬ್ಯಾಟಿಂಗ್ ಪ್ರತಿಭೆ ಕಿರು ಸ್ವರೂಪದ ಕ್ರಿಕೆಟ್‌‍ನಲ್ಲಿ ಲೆಜೆಂಡ್ ಎಂತಲೇ ಹೆಸರಾದವರು. ಆದರೂ ಅವರು ವಿರಾಟ್  ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಇತ್ತೀಚೆಗೆ ಸ್ಥಾನ ಪಡೆದಿಲ್ಲವೆಂದರೆ ಆಶ್ಚರ್ಯವಾಗದೇ ಇರದು.  ಅದೇ ರೀತಿ ಯು-19 ಸ್ಟಾರ್ ಸಫ್ರಾಜ್ ಖಾನ್ ಕೂಡ ಆರ್‌ಸಿಬಿಯಿಂದ ಮಿಸ್ ಆಗಿದ್ದಾರೆ. ತಂಡದಿಂದ ಅವರಿಬ್ಬರನ್ನು ಕೈಬಿಟ್ಟಿದ್ದಕ್ಕೆ ಅನೇಕ ಅಭಿಮಾನಿಗಳು ಕಾರಣ ಬಯಸಿದ್ದರು.  
 
ಆದಾಗ್ಯೂ ಶನಿವಾರ ನಾಯಕ ಕೊಹ್ಲಿ ತಮ್ಮ ತಂಡದ ಚಿಂತಕರ ಚಾವಡಿ ಇಬ್ಬರು ಆಟಗಾರರನ್ನು ಕೈಬಿಟ್ಟಿದ್ದಕ್ಕೆ ಕಾರಣ ವಿವರಿಸಿದ್ದಾರೆ. ಅವರಿಗೆ ವಿರಾಮ ನೀಡಲಾಗಿಲ್ಲ. ನಾವು ಮಧ್ಯಮಕ್ರಮಾಂಕದಲ್ಲಿ ಹೆಚ್ಚು ದೃಢತೆ ನೀಡಲು ಟ್ರಾವಿಸ್ ಹೆಡ್ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು  ಹನ್ನೊಂದು ಮಂದಿ ಆಟಗಾರರ ತಂಡದಿಂದ ಗೇಲ್ ಅನುಪಸ್ಥಿತಿ ಕುರಿತು ಹೇಳಿದರು. 
 
ಟ್ರಾವಿಸ್ ಎಸೆತವನ್ನು ಚೆನ್ನಾಗಿ ಆಡುತ್ತಾರೆ ಮತ್ತು ರಾಹುಲ್ ಮತ್ತು ನನ್ನ ಓಪನಿಂಗ್ ತಂಡಕ್ಕೆ ಚೆನ್ನಾಗಿ ಮೂಡಿಬಂದಿದೆ. ಇದಲ್ಲದೇ ಟ್ರಾವಿಸ್ ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಪುಣೆಯಲ್ಲಿ ಮೂವರು ಎಡಗೈ ಬ್ಯಾಟ್ಸ್‌ಮನ್‌ಗಳು ಇದ್ದಿದ್ದರಿಂದ ಕೂಡ ಟ್ರಾವಿಸ್ ಅವರನ್ನು ತರಲಾಗಿದೆ ಎಂದು ಅವರು ಕೊಹ್ಲಿ ವಿವರಿಸಿದರು.
 
ಸಫ್ರಾಜ್ ಅವರಿಗೆ ವಿಶ್ರಾಂತಿ ನೀಡಿರುವುದಕ್ಕೆ ಅವರ ಕಳಪೆ ಫಿಟ್ನೆಸ್ ಮುಖ್ಯ ಕಾರಣವಾಗಿದೆ. ಫೀಲ್ಡಿಂಗ್‌ನಲ್ಲಿ ಗುಣಮಟ್ಟವಿಲ್ಲದ ತುಂಬಾ ಆಟಗಾರರನ್ನು ಹೊಂದುವುದಕ್ಕೆ ಸಾಧ್ಯವಿಲ್ಲ.  ಔಟ್‌ಫೀಲ್ಡ್‌ನಲ್ಲಿ ಮಿಂಚಿನಂತೆ ಚಲಿಸುವ ಹಾಗಿರಬೇಕು ಎಂದು ಹೇಳಿದರು. ಗೇಲ್ ಮತ್ತು ಸರ್ಫ್ರಾಜ್ ಇದುವರೆಗೆ 8 ಪಂದ್ಯಗಳ ಪೈಕಿ ಕ್ರಮವಾಗಿ 3 ಮತ್ತು 5 ಪಂದ್ಯಗಳಲ್ಲಿ ಆಡಿದ್ದಾರೆ. 

ವೆಬ್ದುನಿಯಾವನ್ನು ಓದಿ