ವಿಶ್ವಕಪ್ ಸೋಲಿನ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಸೈಲೆಂಟ್!

ಶುಕ್ರವಾರ, 24 ನವೆಂಬರ್ 2023 (10:00 IST)
ಮುಂಬೈ: ಟೀಂ ಇಂಡಿಯಾ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಸೋತ ಬಳಿಕ ಕ್ರಿಕೆಟಿಗರು ತಮ್ಮ ಸೋಷಿಯಲ್ ಮೀಡಿಯಾದಿಂದ ಆದಷ್ಟು ದೂರವುಳಿದಿದ್ದಾರೆ.

ವಿಶ್ವಕಪ್ ಸೋಲು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟಿಗರನ್ನು ತೀವ್ರ ನಿರಾಸೆಗೊಳಪಡಿಸಿದೆ. ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ ಇನ್ನೇನು ಫೈನಲ್ ಗೆಲ್ಲುತ್ತದೆ ಎಂಬ ನಂಬಿಕೆಯಲ್ಲಿರುವಾಗ ಕಪ್ ಕಳೆದುಕೊಂಡಿದ್ದು ಕ್ರಿಕೆಟಿಗರನ್ನು ಹತಾಶೆಗೆ ದೂಡಿದೆ.

ಸಾಮಾನ್ಯವಾಗಿ ಯಾವುದೇ ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಕ್ರಿಕೆಟಿಗರು ಪಂದ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಯೇ ಹಾಕುತ್ತಾರೆ. ಆದರೆ ಈ ವಿಶ್ವಕಪ್ ಸೋಲಿನ ಬಳಿಕ ರೋಹಿತ್, ಕೊಹ್ಲಿ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದಾರೆ.

ರೋಹಿತ್ ಆಗಲೀ, ಕೊಹ್ಲಿಯಾಗಲೀ ಇದುವರೆಗೆ ವಿಶ್ವಕಪ್ ಫೈನಲ್ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಒಂದೇ ಒಂದು ಪೋಸ್ಟ್ ಹಾಕಿಲ್ಲ. ಕೇವಲ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಸೇರಿದಂತೆ ಕೆಲವೇ ಕ್ರಿಕೆಟಿಗರು ಮಾತ್ರ ವಿಶ್ವಕಪ್ ಸೋಲಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹಂಚಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ