ಪತ್ರಕರ್ತನ ಇಂಗ್ಲಿಷ್ ಉಚ್ಛಾರಣೆಗೆ ತಬ್ಬಿಬ್ಬಾದ ಶಿಖರ್ ಧವನ್

ಬುಧವಾರ, 17 ಆಗಸ್ಟ್ 2022 (10:29 IST)
ಹರಾರೆ: ವಿದೇಶೀ ಪತ್ರಕರ್ತರ ಉಚ್ಛಾರಣೆಗಳನ್ನು ಅರ್ಥ ಮಾಡಿಕೊಳ್ಳುವುದು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕೆಲವೊಮ್ಮೆ ಕಷ್ಟವಾಗುತ್ತದೆ. ಇಂತಹದ್ದೇ ಸಂದರ್ಭ ಶಿಖರ್ ಧವನ್ ಈಗ ಜಿಂಬಾಬ್ವೆಯಲ್ಲಿ ಎದುರಿಸಿದ್ದಾರೆ.

ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗೆ ಮೊದಲು ಅಧಿಕೃತ ಪತ್ರಿಕಾಗೋಷ್ಠಿಗೆ ಉಪನಾಯಕ ಶಿಖರ್ ಧವನ್ ಆಗಮಿಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಇಂಗ್ಲಿಷ್ ಉಚ್ಛಾರಣೆ ಮಾಡಿದ್ದು ಶಿಖರ್ ಧವನ್ ಗೆ ಕೊಂಚವೂ ಅರ್ಥವಾಗಲಿಲ್ಲ.

ಹೀಗಾಗಿ ನೇರವಾಗಿ ಧವನ್ ನನಗೆ ನೀವು ಹೇಳಿದ್ದು ಅರ್ಥವಾಗಲಿಲ್ಲ. ದಯವಿಟ್ಟು ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿ ಎಂದರು. ಆಗ ಅಲ್ಲಿದ್ದವರು ನಕ್ಕರು. ಆ ಪತ್ರಕರ್ತ ಮತ್ತೆ ಕೊಂಚ ನಿಧಾನವಾಗಿ ಪ್ರಶ್ನೆ ಕೇಳಿದಾಗ ಧವನ್ ಗೆ ಅರ್ಥವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ