ವಿರಾಟ್ ಕೊಹ್ಲಿ ಹಾಜರಿಯಲ್ಲೇ ವಿಂಡೀಸ್ ಸರಣಿಗೆ ನಾಳೆ ಟೀಂ ಇಂಡಿಯಾ ಆಯ್ಕೆ

ಶನಿವಾರ, 20 ಜುಲೈ 2019 (09:54 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ನಾಳೆ ನಡೆಯಲಿದ್ದು, ನಾಯಕ ವಿರಾಟ್ ಕೊಹ್ಲಿ ಆಯ್ಕೆ ಪ್ರಕ್ರಿಯೆ ವೇಳೆ ಹಾಜರಿರಲಿದ್ದಾರೆ.


ಇದರೊಂದಿಗೆ ಈ ಸರಣಿಗೆ ಕೊಹ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಸುದ್ದಿಗಳಿಗೆಲ್ಲಾ ತೆರೆಬಿದ್ದಂತಾಗಿದ್ದು, ಕೊಹ್ಲಿಯೇ ನಾಯಕರಾಗಿ ಮುಂದುವರಿಯಲಿದ್ದಾರೆ.

ಆದರೆ ಧೋನಿ ಭವಿಷ್ಯದ ಬಗ್ಗೆ ಈ ಆಯ್ಕೆ ಸಮಿತಿ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ವಿರಾಟ್ ತಮ್ಮ ನೆಚ್ಚಿನ ‘ಕ್ಯಾಪ್ಟನ್’ ಪರವಾಗಿ ಬ್ಯಾಟ್ ಬೀಸುತ್ತಾರಾ ಅಥವಾ ಭವಿಷ್ಯದ ದೃಷ್ಟಿಯಿಂದ ಧೋನಿಗೆ ವಿಶ್ರಾಂತಿ ನೀಡಬಹುದಾ ಎಂಬುದು ಸದ್ಯದ ಕುತೂಹಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ