ಐಸಿಸಿ ಅವಾರ್ಡ್ ಘೋಷಣೆ: ಒಂದೇ ವರ್ಷ ಮೂರು ಟಾಪ್ ಪ್ರಶಸ್ತಿ ಗೆದ್ದು ದಾಖಲೆ ಮಾಡಿದ ವಿರಾಟ್ ಕೊಹ್ಲಿ

ಮಂಗಳವಾರ, 22 ಜನವರಿ 2019 (12:02 IST)
ದುಬೈ: 2018 ನೇ ಸಾಲಿನ ಐಸಿಸಿ ಪ್ರಶಸ್ತಿ ಘೋಷಣೆ ಮಾಡಿದ್ದು, ಒಂದೇ ವರ್ಷ ಮೂರು ಟಾಪ್ ಪ್ರಶಸ್ತಿಗಳನ್ನು ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿನೂತನ ದಾಖಲೆ ಮಾಡಿದ್ದಾರೆ.


ಗ್ಯಾರಿ ಸೋಬರ್ಸ್ ಸ್ಮರಣಾರ್ಥ ನೀಡುವ ಐಸಿಸಿ ಶ್ರೇಷ್ಠ ಟೆಸ್ಟ್ ಆಟಗಾರ, ಶ್ರೇಷ್ಠ ಏಕದಿನ ಆಟಗಾರ ಮತ್ತು ವರ್ಷದ ಶ್ರೇಷ್ಠ ಕ್ರಿಕೆಟಿಗ ಎಂಬ ಮೂರು ಅಗ್ರ ಪ್ರಶಸ್ತಿಗಳು ಕೊಹ್ಲಿ ಪಾಲಾಗಿದೆ.

ಈ ಮೂಲಕ ಒಂದೇ ವರ್ಷ ಐಸಿಸಿಯ ಮೂರು ಅಗ್ರ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರ ಎಂಬ ದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಕಳೆದ ವರ್ಷ ಟೆಸ್ಟ್ ಮತ್ತು ಏಕದಿನ ಎರಡೂ ಫಾರ್ಮ್ಯಾಟ್ ಗಳಲ್ಲಿ ರನ್ ಹೊಳೆಯನ್ನೇ ಹರಿಸಿದ್ದರು. ಹಲವು ಗೆಲುವುಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದೇ ಕಾರಣಕ್ಕೆ ಅವರಿಗೆ ಈ ಗೌರವ ಸಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ