ಮುಂಬೈ: ಟೀಂ ಇಂಡಿಯಾ ಡಿವೋರ್ಸ್ ಕ್ಲಬ್ ಗೆ ಈಗ ವೀರೇಂದ್ರ ಸೆಹ್ವಾಗ್ ಪ್ರೆಸಿಡೆಂಟ್. ಸೆಹ್ವಾಗ್ ವಿಚ್ಛೇದನ ವದಂತಿ ಬೆನ್ನಲ್ಲೇ ಈಗ ಸೋಷಿಯಲ್ ಮೀಡಿಯಾದಲ್ಲಿ ಫನ್ನಿ ಮೆಮೆ, ಕಾಮೆಂಟ್ ಗಳು ಬರುತ್ತಿವೆ.
ಟೀಂ ಇಂಡಿಯಾದ ಅನೇಕ ಕ್ರಿಕೆಟಿಗರ ವಿಚ್ಛೇದನ ಸುದ್ದಿಗಳು ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್ ಬಳಿಕ ಈಗ ವೀರೇಂದ್ರ ಸೆಹ್ವಾಗ್ ವಿಚ್ಛೇದನ ಸುದ್ದಿಯಾಗಿದೆ.
ಅದೂ 20 ವರ್ಷಗಳ ದಾಂಪತ್ಯ ಜೀವನಕ್ಕೆ ಸೆಹ್ವಾಗ್ ಅಂತ್ಯ ಹಾಡಿದ್ದಾರೆ ಎಂದು ಸುದ್ದಿಯಾಗಿದೆ. ಇದನ್ನು ಇಟ್ಟುಕೊಂಡು ಈಗ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಫನ್ನಿ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ. ವಿಚ್ಛೇದನ ಪಡೆದಿರುವ ಎಲ್ಲಾ ಕ್ರಿಕೆಟಿಗರೂ ಸೇರಿಕೊಂಡು ಸೆಹ್ವಾಗ್ ಗೆ ಹಾರ ಹಾಕುತ್ತಿರುವ ಫೋಟೋ ಪ್ರಕಟಿಸಿ ಈಗ ಸೆಹ್ವಾಗ್ ಡಿವೋರ್ಸ್ ಕ್ಲಬ್ ಅಧ್ಯಕ್ಷ ಎಂದು ತಮಾಷೆ ಮಾಡಿದ್ದಾರೆ.
ಇನ್ನೊಬ್ಬರು ಹಾರ್ದಿಕ್ ಪಾಂಡ್ಯ ಡಿವೋರ್ಸ್ ಪಾರ್ಟಿ ಮಾಡುವ ಫನ್ನಿ ವಿಡಿಯೋ ಪ್ರಕಟಿಸಿದ್ದಾರೆ. ಇಲ್ಲಿ ಹಾರ್ದಿಕ್ ಎಲ್ಲಾ ವಿಚ್ಛೇದನ ಪಡೆದಿರುವ ಕ್ರಿಕೆಟಿಗರನ್ನು ಕರೆದು ಬಿಂದಾಸ್ ಡ್ಯಾನ್ಸ್ ಮಾಡುವ ದೃಶ್ಯವಿದೆ. ಇನ್ನು, ಕೆಲವರು ಡಿವೋರ್ಸ್ ಆಗಿರುವ ಆಟಗಾರರ ತಂಡವನ್ನೇ ರಚಿಸಿದ್ದಾರೆ.