ವೀರೇಂದ್ರ ಸೆಹ್ವಾಗ್, ಪತ್ನಿ ಆರತಿ ಬಾಳಿನಲ್ಲಿ ಬಿರುಗಾಳಿ: 20 ವರ್ಷಗಳ ದಾಂಪತ್ಯಕ್ಕೆ ದಿ ಎಂಡ್
ಟೀಂ ಇಂಡಿಯಾ ಕಂಡ ಸ್ಪೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್. ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕವೂ ತಮ್ಮ ತಮಾಷೆಯ ಸಂದೇಶಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇದ್ದರು. ಆದರೆ ಈಗ ಅವರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ.
ಸೆಹ್ವಾಗ್ ತಮ್ಮ ಪತ್ನಿ ಆರತಿಗೆ ವಿಚ್ಛೇದನ ನೀಡಿದ್ದಾರೆ ಎಂದು ಸುದ್ದಿಯಾಗಿದೆ. ಇಬ್ಬರೂ ಪ್ರೀತಿಸಿ 2004 ರಲ್ಲಿ ಮದುವೆಯಾಗಿದ್ದರು. ಆರತಿ ಸೆಹ್ವಾಗ್ ಸಂಬಂಧಿಕರ ಹುಡುಗಿಯಾಗಿದ್ದರು. ಹೀಗಾಗಿ ಇವರ ಮದುವೆಯೂ ಸಲೀಸಲಾಗಿ ನಡೆದಿತ್ತು. ಇಬ್ಬರಿಗೂ ಇಬ್ಬರು ಪುತ್ರರಿದ್ದಾರೆ. ಓರ್ವ ಪುತ್ರ ಈಗಾಗಲೇ ಕ್ರಿಕೆಟಿಗನಾಗಿ ರೂಪುಗೊಳ್ಳುತ್ತಿದ್ದಾನೆ.
ಇತ್ತ ಸೆಹ್ವಾಗ್ ನಿವೃತ್ತಿ ಬಳಿಕ ದೆಹಲಿಯಲ್ಲಿ ತಮ್ಮದೇ ಶಾಲೆ ನಡೆಸುತ್ತಿದ್ದಾರೆ. ಆದರೆ ಇದೀಗ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಅನ್ ಫಾಲೋ ಮಾಡಿಕೊಂಡಿದ್ದು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಸುದ್ದಿಯಾಗಿದೆ.