ತಂಡದಲ್ಲಿ ಯಾರ ಸ್ಥಾನಕ್ಕೂ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದು ಕೊಹ್ಲಿ ಖಡಕ್ ಆಗಿ ಹೇಳಿದ್ಯಾಕೆ?

ಶನಿವಾರ, 18 ಆಗಸ್ಟ್ 2018 (16:52 IST)
ನಾಟಿಂಗ್‌ಹ್ಯಾಮ್: ಟ್ರೆಂಟ್‌ಬ್ರಿಡ್ಜ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ದ ನಡೆಯಲಿರುವ ಮೂರನೇ ಟೆಸ್ಟ್‌ಗೆ ಮೊದಲು ಮೊದಲು ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಂಡದಲ್ಲಿ ಯಾರ ಸ್ಥಾನಕ್ಕೂ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.


ಇಂಗ್ಲೆಂಡ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಪರದಾಡುತ್ತಿದ್ದಾರೆ. ಆದರೆ ಸತತ ಬದಲಾವಣೆಯು ಆಟಗಾರರಲ್ಲಿ ಆತ್ಮವಿಶ್ವಾಸ ಕೊರತೆಯನ್ನುಂಟು ಮಾಡುತ್ತಿದ್ದು, ಇದರಂತೆ ನಾಯಕ ಕೊಹ್ಲಿ ವಿರುದ್ಧ ಟೀಕೆಗಳು ಎದ್ದಿವೆ.


ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿರಾಟ್, ‘ನಮ್ಮ ಪಾಲಿಗೆ ಪಂದ್ಯ ಗೆಲ್ಲುವುದೊಂದೇ ಮುಖ್ಯ ಗುರಿ. ನಾವು ವೈಯಕ್ತಿಕ ಆಟಗಾರನ ಫಾರ್ಮ್ ಆಥವಾ ಆತನ ಭವಿಷ್ಯ ಬಗ್ಗೆ ಚಿಂತಿಸುವುದಿಲ್ಲ. ನಿಮ್ಮ ಸಮಯ ಬಂದಾಗ ಆಡಬೇಕು. ಹಾಗಾಗಿ ಇಂತಹ ಆಲೋಚನೆಗಳನ್ನು ತಂಡದ ಹೊರಗಿದ್ದವರು ಸೃಷ್ಟಿಸುತ್ತಾರೆ’ ಎಂದು ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ