ಯಾವುದೇ ತಂಡವನ್ನೂ ಲಘುವಾಗಿ ಪರಿಗಣಿಸುವುದಿಲ್ಲ: ವಿರಾಟ್ ಕೊಹ್ಲಿ
ಪಂದ್ಯದ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ. ನಮ್ಮ ತಂಡ ಈಗ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ ಅದನ್ನೇ ಮುಂದುವರೆಸುವತ್ತ ಪ್ರಯತ್ನ ನಡೆಸುತ್ತೇವೆ. ಇದರರ್ಥ ನಾವು ಅಹಂಕಾರಿಗಳಾಗಿದ್ದೇವೆಂದಲ್ಲ. ಯಾವುದೇ ಎದುರಾಳಿ ತಂಡವನ್ನ ಗೌರವಿಸುತ್ತೇವೆ. ಯಾವುದೇ ತಂಡ ಯಾವುದೇ ಸಂದರ್ಭದಲ್ಲಿ ಸಿಡಿದೇಳಬಹುದು ಎಂದು ವಿರಾಟ್ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಶ್ರೀಲಂಕಾ ವಿಶ್ವದ ಟಾಪ್ 8 ತಂಡಗಲಲ್ಲಿ ಒಂದು. ಐಸಿಸಿ ಸರಣಿಗಳಲ್ಲಿ ಇದುವರೆಗೆ ಒಳ್ಳೆಯ ಪ್ರದರ್ಶನವನ್ನೇ ನೀಡುತ್ತಿದ್ದು, ಪ್ರತಿಭಾನ್ವಿತ ಆಟಗಾರರಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಗೆ ಆಗಮಿಸಿದ ಕೊಹ್ಲಿ ಫುಲ್ ರಿಲ್ಯಾಕ್ಸ್ ಮೂಡ್`ನಲ್ಲಿದ್ದರು. ಈ ಸಂದರ್ಭ ಮಾಧ್ಯಮದವರಿಗೆ ಸವಾಲು ಹಾಕಿದ ಕೊಹ್ಲಿ ಬೌಲರ್`ಗಳ ೆದುರು ಅವರನ್ನ ಬ್ಯಾಟಿಂಗ್ ಮಾಡುವುದಕ್ಕೆ ಹೇಳಿ ಎಂದರು. ಆದರೆ, ಕೊಹ್ಲಿ ಮಾತನ್ನ ಹೇಳಿದ್ದು ತಮಾಷೆಗೆ.