ಕೊಹ್ಲಿ ಮ್ಯಾನೇಜರ್, ರೋಹಿತ್ ಶರ್ಮಾ ಪತ್ನಿ ನಡುವಿನ ಬಾಂಧವ್ಯವೇನು?

ಬುಧವಾರ, 19 ಜುಲೈ 2023 (08:30 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮ್ಯಾನೇಜರ್ ಬಂಟಿ ಸಜ್ ದೇ ಮತ್ತು ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ ದೇ ನಡುವಿನ ಬಾಂಧವ್ಯವೇನು ಗೊತ್ತಾ?

ವಿರಾಟ್ ಕೊಹ್ಲಿಯ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವುದು ಕಾರ್ನರ್ ಸ್ಟೋನ್ ಮ್ಯಾನೇಜ್ ಮೆಂಟ್ ಕಂಪನಿ. ಇದರ ಮಾಲಿಕ ಬಂಟಿ ಸಜ್ ದೇ. ಅವರ ಕಂಪನಿ ಕೊಹ್ಲಿ ಮಾತ್ರವಲ್ಲದೆ, ಕೆಎಲ್ ರಾಹುಲ್, ವಿಜಯ್ ದೇವರಕೊಂಡ, ಸಾನಿಯಾ ಮಿರ್ಜಾ ಮುಂತಾದ ಸೆಲೆಬ್ರಿಟಿಗಳ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದೆ.

ಬಂಟಿ ಸಜ್ ದೇ ಮೂಲತಃ ಮುಂಬೈನವರು. ರೋಹಿತ್ ಶರ್ಮಾ ಪತ್ನಿ ರಿತಿಕಾ ಸಹೋದರ ಸಂಬಂಧಿ. ರಿತಿಕಾ ಕೂಡಾ ಇದೇ ಕಂಪನಿಯ ಉದ್ಯೋಗಿಯಾಗಿದ್ದರು. ರಿತಿಕಾ ಆಗ ವಿರಾಟ್ ಕೊಹ್ಲಿ ಮತ್ತು ರೋಹಿತ್ ಇಬ್ಬರ ಮ್ಯಾನೇಜರ್ ಆಗಿದ್ದರು. ಆಗಲೇ ರೋಹಿತ್ ಜೊತೆಗೆ ರಿತಿಕಾ ಪ್ರೇಮ ಚಿಗುರಿತ್ತು. ಈಗಲೂ ಕೊಹ್ಲಿಯ ವ್ಯವಹಾರಗಳನ್ನು ಇದೇ ಬಂಟಿ ಸಜ್ ದೇ ಕಂಪನಿ ನೋಡಿಕೊಳ್ಳುತ್ತಿದ್ದು, ಅವರಿಗೆ ಪ್ರಮುಖ ಜಾಹೀರಾತು ಒಪ್ಪಂದಗಳನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ