ಸುಪ್ರೀಂ ಕೋರ್ಟ್ ಆದೇಶದಿಂದ ಐಪಿಎಲ್, ರಣಜಿ ಟ್ರೋಫಿ ಗತಿಯೇನು?

ಮಂಗಳವಾರ, 3 ಜನವರಿ 2017 (10:50 IST)
ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಬಿಸಿಸಿಐನ ಟಾಪ್ ಅಧಿಕಾರಿಗಳೆಲ್ಲಾ ಮನೆ ಸೇರಿದ್ದಾರೆ. ಕ್ರಿಕೆಟ್ ಆಡಳಿತ ನಡೆಸುವರೇ ಮನೆಯಲ್ಲಿರುವಾಗ ಮೈದಾನದ ಕ್ರಿಕೆಟ್ ವೇಳಾ ಪಟ್ಟಿಯ ಗತಿಯೇನು ಎಂಬ ಆತಂಕ ಕ್ರಿಕೆಟ್ ವಲಯದಲ್ಲಿದೆ.

ಮುಖ್ಯವಾಗಿ ಈಗ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಗಳು ನಡೆಯುತ್ತಿದ್ದು, ಫೈನಲ್ ಪಂದ್ಯದ ವೇಳಾ ಪಟ್ಟಿ ನಿರ್ಧರಿಸಬೇಕಿದೆ. ಇದಲ್ಲದೆ, ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ,  ಏಪ್ರಿಲ್ ನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕೆ ಪೂರ್ವ ಭಾವಿ ಸಿದ್ಧತೆಗಳು ನಡೆಸಬೇಕಿದೆ. ಇದನ್ನೆಲ್ಲಾ ಮಾಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಆದರೆ ಕ್ರಿಕೆಟ್ ಪಂದ್ಯಗಳಿಗೆ ಯಾವುದೇ ತೊಂದರೆಯಾಗದು ಎಂಬ ವಿಶ್ವಾಸ ಲೋಧಾ ಸಮಿತಿಯದ್ದು. ರಣಜಿ ಕ್ರಿಕೆಟ್ ಫೈನಲ್ ಹಂತ ತಲುಪಿದೆ. ಇನ್ನು, ಆಸ್ಟ್ರೇಲಿಯಾ ಸರಣಿಯ ವೇಳಾ ಪಟ್ಟಿ ಸಿದ್ಧವಾಗಿದೆ. ಹೀಗಾಗಿ ಇದಕ್ಕೆ ಯಾವುದೇ ತೊಂದರೆಯಾಗದು ಎಂಬುದು ಸಮಿತಿಯ ವಿಶ್ವಾಸ.

ಆದರೆ ಐಪಿಎಲ್ ವಿಷಯದಲ್ಲಿ ಹಾಗಲ್ಲ. ಅದರ ಪೂರ್ವ ಸಿದ್ಧತೆಗಳು ಇನ್ನೂ ಪ್ರಾರಂಭವಾಗಿಲ್ಲ. ಇದರಿಂದಾಗಿ ಐಪಿಎಲ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಆದರೆ ಆದಷ್ಟು ಬೇಗ ಕ್ರಿಕೆಟ್ ಸಂಸ್ಥೆಗೆ ಅಧಿಕಾರಿಗಳನ್ನು ನೇಮಿಸಿದರೆ ಕ್ರಿಕೆಟ್ ದೃಷ್ಟಿಯಿಂದ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ