ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ, ಪಾಕಿಸ್ತಾನ ಮುಂದಿನ ಪಂದ್ಯ ಯಾವುದು ನೋಡಿ
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಉಭಯ ದೇಶಗಳ ಕ್ರೀಡಾ ಪ್ರೇಮಿಗಳಲ್ಲಿ ವಿಶೇಷ ಉತ್ಸಾಹವಿರುತ್ತದೆ. ಸಾಂಪ್ರದಾಯಿಕ ಎದುರಾಳಿಯಾಗಿರುವುದರಿಂದ ಒಂದು ರೀತಿ ಯುದ್ಧದಂತೆ ವಾತಾವರಣವಿರುತ್ತದೆ.
ಹೀಗಾಗಿ ಎರಡೂ ದೇಶಗಳು ಪರಸ್ಪರ ಸೆಣಸಾಡುತ್ತಿವೆ ಎಂದರೆ ಮೈದಾನದಲ್ಲಿ ಮತ್ತು ಟಿವಿಯಲ್ಲಿ ವೀಕ್ಷಣೆ ಮಾಡುವವರ ಸಂಖ್ಯೆ ದುಪ್ಪಟ್ಟಾಗಿರುತ್ತದೆ. ಈ ಎರಡೂ ತಂಡಗಳ ಮುಂದಿನ ಕಾಳಗ ನಡೆಯಲಿರುವುದು ಏಷ್ಯಾ ಕಪ್ ಟೂರ್ನಮೆಂಟ್ ನಲ್ಲಿ.
ಇದೇ ವರ್ಷ ಸೆಪ್ಟೆಂಬರ್ 19 ಪಂದ್ಯಗಳನ್ನೊಳಗೊಂಡ ಏಷ್ಯಾ ಕಪ್ ಆಯೋಜಿಸಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ ತೀರ್ಮಾನಿಸಿದೆ. ಈ ಬಾರಿ ಭಾರತ ಏಷ್ಯಾ ಕಪ್ ಆತಿಥ್ಯ ವಹಿಸಲಿದೆ. ಆದರೆ ಈಗಾಗಲೇ ಆಗಿರುವ ಒಪ್ಪಂದದಂತೆ ಭಾರತ-ಪಾಕಿಸ್ತಾನ ಪಂದ್ಯ ಮಾತ್ರ ಶ್ರೀಲಂಕಾ ಅಥವಾ ಯುಎಇನಲ್ಲಿ ನಡೆಯುವ ಸಾಧ್ಯತೆಗಳಿವೆ.