ಶಿಖರ್ ಧವನ್ ಗೆ ‘ಗಬ್ಬರ್’ ಹೆಸರು ಕೊಟ್ಟವರು ಯಾರು ಗೊತ್ತೇ?
ಸೋಮವಾರ, 4 ಜೂನ್ 2018 (09:13 IST)
ಮುಂಬೈ: ಟೀಂ ಇಂಡಿಯಾ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ರನ್ನು ಅಭಿಮಾನಿಗಳು, ಸಹ ಕ್ರಿಕೆಟಿಗರು ಪ್ರೀತಿಯಿಂದ ಗಬ್ಬರ್ ಎಂದು ಕರೆಯುತ್ತಾರೆ. ಆದರೆ ಧವನ್ ಗೆ ಈ ಹೆಸರು ಬಂದಿದ್ದು ಹೇಗೆ ಗೊತ್ತಾ?
ಈ ರಹಸ್ಯವನ್ನು ಸ್ವತಃ ಧವನ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ‘ಯಾರೂ ನನ್ನನ್ನು ಧವನ್, ಶಿಖರ್ ಎಂದೆಲ್ಲಾ ಕರೆಯುವುದೇ ಇಲ್ಲ. ಗಬ್ಬರ್ ಎಂದೇ ಕರೆಯುತ್ತಾರೆ. ನನಗೆ ಈ ಹೆಸರು ಕೊಟ್ಟಿದ್ದು ವಿಜಯ್ ದಹಿಯಾ’ ಎಂದು ಧವನ್ ಬಹಿರಂಗಪಡಿಸಿದ್ದಾರೆ.
ಅಷ್ಟೇ ಅಲ್ಲ, ಟೀಂ ಇಂಡಿಯಾ ಕಬಡ್ಡಿ ಸ್ಟೈಲ್ ನಲ್ಲಿ ಸೆಲೆಬ್ರೇಷನ್ ಮಾಡುವುದಕ್ಕೂ ತಾವೇ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ. ಕಬಡ್ಡಿ ಎಂದರೆ ನನಗಿಷ್ಟ. ಆಸ್ಟ್ರೇಲಿಯಾದಲ್ಲಿ ಒಮ್ಮೆ ಶೇನ್ ವ್ಯಾಟ್ಸನ್ ವಿಕೆಟ್ ಕಿತ್ತು ಈ ರೀತಿ ಸಂಭ್ರಮಿಸಿದ್ದೆ. ಬಳಿಕ ಅಭಿಮಾನಿಗಳೂ ನನ್ನನ್ನು ನೋಡಿದಾಗಲೆಲ್ಲಾ ಈ ರೀತಿ ಮಾಡುತ್ತಿದ್ದರು. ಬಳಿಕ ನಾವೆಲ್ಲರೂ ಈ ರೀತಿ ಸೆಲೆಬ್ರೇಷನ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡೆವು’ ಎಂದು ಧವನ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.