ಅನಿಲ್ ಕುಂಬ್ಳೆ ಪ್ರಕಾರ ಟೀಂ ಇಂಡಿಯಾ ಬೆಸ್ಟ್ ಕ್ಯಾಪ್ಟನ್ ಯಾರು ಗೊತ್ತಾ?!
ಸಾಮಾನ್ಯವಾಗಿ ಶ್ರೇಷ್ಠ ಕ್ಯಾಪ್ಟನ್ ಯಾರು ಎಂದರೆ ಸೌರವ್ ಗಂಗೂಲಿ ಅಥವಾ ಧೋನಿ ಹೆಸರು ಎಲ್ಲರೂ ಹೇಳುತ್ತಾರೆ. ಆದರೆ ಅನಿಲ್ ಕುಂಬ್ಳೆ ಇವರಿಬ್ಬರ ಹೆಸರನ್ನೂ ಹೇಳಿಲ್ಲ.
ಬದಲಾಗಿ ಅವರ ಪ್ರಕಾರ ಟೀಂ ಇಂಡಿಯಾ ಕಂಡ ಬೆಸ್ಟ್ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್. ಇವರ ನಾಯಕತ್ವದಲ್ಲೇ ಅನಿಲ್ ಕುಂಬ್ಳೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಆರಂಭಿಸಿದ್ದರು. ಉಳಿದಿಬ್ಬರೂ ನಾಯಕರ ಅಡಿಯಲ್ಲಿ ಕುಂಬ್ಳೆ ಆಡಿದ್ದರೂ ಅವರಿಗೆ ಅಜರುದ್ದೀನ್ ಬೆಸ್ಟ್ ಎನಿಸಿದ್ದಾರೆ. ಆದರೆ ಅನಿಲ್ ಕುಂಬ್ಳೆ ಪತ್ನಿ ಚೇತನಾಗೆ ಧೋನಿಯೇ ಫೇವರಿಟ್ ಅಂತೆ. ಧೋನಿಯನ್ನು ಭೇಟಿಯಾದಾಗಲೆಲ್ಲಾ ಚೇತನಾ ಒಂದು ಸೆಲ್ಫೀ ತೆಗೆದುಕೊಳ್ಳುವುದನ್ನು ಮಿಸ್ ಮಾಡಿಕೊಳ್ಳುವದಿಲ್ಲವಂತೆ.