WPL ಕಿರೀಟಕ್ಕೆ ಯಾರಾಗುತ್ತಾರೆ ಅಧಿಪತಿ: ಮುಂಬೈ ಇಂಡಿಯನ್ಸ್‌- ಡೆಲ್ಲಿ ಕ್ಯಾಪಿಟಲ್ಸ್‌ ಕಾದಾಟ ಇಂದು

Sampriya

ಶನಿವಾರ, 15 ಮಾರ್ಚ್ 2025 (14:33 IST)
Photo Courtesy X
ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ನ ಮೂರನೇ ಆವೃತ್ತಿಯ ಫೈನಲ್‌ ಇಂದು ನಡೆಯಲಿದೆ. ಮುಂಬೈನಲ್ಲಿ ನಡೆಯುವ ಈ ಹೈವೋಲ್ಟೇಜ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಮೊದಲ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದ ಹರ್ಮನ್‌ಪ್ರೀತ್‌ ಕೌರ್‌ ಬಳಗವು ಮತ್ತೊಬ್ಬೆ ಪ್ರಶಸ್ತಿಗೆ ಮುತ್ತಿಕ್ಕುವ ಕನಸು ಕಾಣುತ್ತಿದೆ. ಸತತ ಮೂರನೇ ಬಾರಿ ಫೈನಲ್‌ ಪ್ರವೇಶಿಸಿರುವ ಮೆಗ್‌ ಲ್ಯಾನಿಂಗ್‌ ನಾಯಕತ್ವದ ತಂಡವು ಚೊಚ್ಚಲ ಪ್ರಶಸ್ತಿಯನ್ನು ಎದುರು ನೋಡಿತ್ತಿದೆ.

ಕ್ಯಾಪಿಟಲ್ಸ್ ತಂಡ ಲೀಗ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ನೇರವಾಗಿ ಫೈನಲ್‌ಗೆ ಪ್ರವೇಶಿಸಿತ್ತು. ಮುಂಬೈ ಸಹ ಇಷ್ಟೇ ಅಂಕ ಕಲೆ ಹಾಕಿದ್ರೂ ಸಹ ರನ್‌ ರೇಟ್‌ ವಿಚಾರದಲ್ಲಿ ಹಿಂದೆ ಇದ್ದಿದ್ದರಿಂದ ಎಲಿಮಿನೇಟರ್‌ನಲ್ಲಿ ಗುಜರಾತ್‌ ಜೈಂಟ್ಸ್ ತಂಡವನ್ನು ಎದುರಿಸಿತು. ಎಲಿಮಿನೇಟರ್‌ ಪಂದ್ಯದಲ್ಲಿ 47 ರನ್‌ಗಳಿಂದ ಜೈಂಟ್ಸ್‌ ತಂಡವನ್ನು ಮಣಿಸಿದ ಮುಂಬೈ ಫೈನಲ್‌ಗೆ ಪ್ರವೇಶ ಪಡೆದಿದೆ.
 

ಡೆಲ್ಲಿ ತಂಡವು ಮೊದಲ ಆವೃತ್ತಿಯಲ್ಲಿ ಏಳು ವಿಕೆಟ್‌ಗಳಿಂದ ಮುಂಬೈ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಎರಡನೇ ಆವೃತ್ತಿಯಲ್ಲಿ 8 ವಿಕೆಟ್‌ಗಳಿಂದ ಆರ್‌ಸಿಬಿ ವಿರುದ್ಧ ಮುಗ್ಗರಿಸಿತ್ತು. ಇದೀಗ ಮೂರನೇ ಪ್ರಯತ್ನದಲ್ಲಿ ಚರಿತ್ರೆ ನಿರ್ಮಿಸುವ ತವಕದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ