WPLನಲ್ಲಿ ಇಂದು ಹೈವೋಲ್ಟೇಜ್‌ ಪಂದ್ಯ: ಯಾರಿಗೆ ಫೈನಲ್‌ ಟಿಕೆಟ್‌, ಯಾರು ಮನೆಗೆ

Sampriya

ಗುರುವಾರ, 13 ಮಾರ್ಚ್ 2025 (14:18 IST)
Photo Courtesy X
ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಇಲ್ಲಿ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಇಲ್ಲಿನ ಕ್ರೀಡಾಂಗಣದಲ್ಲಿ ನಡೆಯುವ ಎಲಿಮಿನೇಟರ್‌ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಗುಜರಾತ್‌ ಜೈಂಟ್ಸ್ ಮುಖಾಮುಖಿಯಾಗಲಿವೆ.

ಲೀಗ್‌ ಹಂತದಲ್ಲಿ ಅಗ್ರಸ್ಥಾನ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನೇರವಾಗಿ ಫೈನಲ್‌ ಪ್ರವೇಶಿಸಿದ್ದರೆ, ಎರಡನೇ ಸ್ಥಾನ ಪಡೆದ ಮುಂಬೈ ಮತ್ತು ಮೂರನೇ ಸ್ಥಾನ ಪಡೆದ ಗುಜರಾತ್‌ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆದಿದ್ದವು. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ ಪ್ರವೇಶಿಸಲಿದೆ.

ನಾಲ್ಕನೇ ಸ್ಥಾನ ಪಡೆದ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಐದನೇ ಸ್ಥಾನ ಪಡೆದ ಯು.ಪಿ. ವಾರಿಯರ್ಸ್‌ ತಂಡಗಳು ಲೀಗ್‌ ಹಂತದಲ್ಲೇ ಹೊರಬಿದ್ದಿವೆ.

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ತಂಡವು ತವರಿನ ಅಂಗಳದಲ್ಲಿ ಮತ್ತೆ ಟ್ರೋಫಿ ಗೆಲ್ಲುವ ಛಲದಲ್ಲಿದೆ. 2023ರಲ್ಲಿ ನಡೆದಿದ್ದ ಚೊಚ್ಚಲ ಡಬ್ಲ್ಯುಪಿಎಲ್‌ನಲ್ಲಿಯೂ ಮುಂಬೈ ಚಾಂಪಿಯನ್ ಆಗಿತ್ತು.  ಮುಂಬೈ ತಂಡವನ್ನು ಕಟ್ಟಿಹಾಕುವುದು ಆ್ಯಶ್ಲೆ ಗಾರ್ಡನರ್ ಬಳಗಕ್ಕೆ ಸುಲಭವಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ