Chahal: ಯಜ್ವೇಂದ್ರ ಚಹಲ್ ಧನಶ್ರೀ ವಿಚ್ಛೇದನ ಯಾಕಾಯ್ತು ಎನ್ನುವುದು ಮೈದಾನದಲ್ಲೇ ಬಯಲು

Krishnaveni K

ಭಾನುವಾರ, 9 ಮಾರ್ಚ್ 2025 (18:01 IST)
Photo Credit: X
ದುಬೈ: ಇತ್ತೀಚೆಗಷ್ಟೇ ಟೀಂ ಇಂಡಿಯಾ ಕ್ರಿಕೆಟಿಗ ಯಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮ ವಿಚ್ಛೇದನ ಪಡೆದುಕೊಂಡಿದ್ದರು. ಅವರ ವಿಚ್ಛೇದನ ಯಾಕಾಯ್ತು ಎನ್ನುವುದು ಈಗ ಮೈದಾನದಲ್ಲೇ ಬಯಲಾಗಿದೆ.

ಕ್ರಿಕೆಟಿಗ ಯಜ್ವೇಂದ್ರ ಚಹಲ್ ರಿಂದ ಧನಶ್ರೀ ಬೇರೆಯಾದಾಗ ಎಲ್ಲರೂ ಆಕೆ ದುಡ್ಡಿಗಾಗಿ ಆತನನ್ನು ಮದುವೆಯಾಗಿದ್ದು, ಬೇರೆ ಹುಡುಗರ ಜೊತೆ ಸುತ್ತಾಡುತ್ತಿದ್ದಳು ಎಂದೆಲ್ಲಾ ಪುಕಾರು ಹಬ್ಬಿಸಿದ್ದರು. ಆದರೆ ಈಗ ಚಹಲ್ ಫೋಟೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಚಹಲ್ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕೇವಲ ಅವರು ಮಾತ್ರವಲ್ಲ, ಅವರ ಜೊತೆಗೆ ಸುಂದರ ಹುಡುಗಿಯೂ ಜೊತೆಯಾಗಿದ್ದಾಳೆ.

ಇಬ್ಬರೂ ಅಕ್ಕಪಕ್ಕ ಅಂಟಿಕೊಂಡೇ ಕೂತು ಪುಕ ಪುಕ ನಗುತ್ತಿರುವುದು ನೋಡಿ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಇದೇ ಕೆಲಸವನ್ನು ಧನಶ್ರೀಯೋ, ನತಾಶಾ (ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ) ಮಾಡಿದ್ದರೆ ದೊಡ್ಡ ಸುದ್ದಿ ಮಾಡುತ್ತಿದ್ದರು. ಆದರೆ ಚಹಲ್ ಮಾಡಿದ ಕಾರಣ ಯಾರೂ ಸೊಲ್ಲೆತ್ತುತ್ತಿಲ್ಲ. ಪತ್ನಿಗೆ ಸೋಡಾ ಚೀಟಿ ಕೊಟ್ಟ ಬೆನ್ನಲ್ಲೇ ಚಹಲ್ ಹಾಯಾಗಿ ಮತ್ತೊಬ್ಬ ಹುಡುಗಿ ಜೊತೆ ಸುತ್ತಾಡುತ್ತಿದ್ದಾರೆ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಧನಶ್ರೀ ವಿಚ್ಛೇದನ ನೀಡಿರಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ