ಬೇರೆ ಕ್ರಿಕೆಟಿಗರಿಗೆ ಅನ್ವಯವಾಗುವ ನಿಯಮ ಧೋನಿ, ಶಿಖರ್ ಧವನ್ ಗೆ ಏಕಿಲ್ಲ?

ಬುಧವಾರ, 5 ಡಿಸೆಂಬರ್ 2018 (08:59 IST)
ಮುಂಬೈ: ರಾಷ್ಟ್ರೀಯ ತಂಡದಲ್ಲಿ ಆಡದ, ಫಾರ್ಮ್ ಕಳೆದುಕೊಂಡ ಕ್ರಿಕೆಟಿಗರು ದೇಶೀಯ ಕ್ರಿಕೆಟ್ ನಲ್ಲಿ ತಮ್ಮ ತವರು ತಂಡದ ಪರ ಆಡಬೇಕೆಂಬುದು ಬಿಸಿಸಿಐ ನಿಯಮ. ಆದರೆ ಧೋನಿ ಮತ್ತು ಶಿಖರ್ ಧವನ್ ಗೆ ಈ ನಿಯಮ ಏಕೆ ಅನ್ವಯವಾಗಿಲ್ಲ ಎಂದು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.

ಇಬ್ಬರೂ ಪ್ರಸಕ್ತ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿಲ್ಲ. ಬಿಡುವಿನ ವೇಳೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಈ ಕ್ರಿಕೆಟಿಗರು ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ತಮ್ಮ ತವರು ತಂಡದ ಪರ ಏಕೆ ಆಡುತ್ತಿಲ್ಲ ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.

ಹಿಂದೆ ಧೋನಿಗೆ ಬಿಸಿಸಿಐ ಆಯ್ಕೆ ಸಮಿತಿ ದೇಶೀಯ ಕ್ರಿಕೆಟ್ ಆಡಲು ಸೂಚಿಸಿತ್ತು. ಆದರೆ ಹಿರಿಯ ವಿಕೆಟ್ ಕೀಪರ್ ಇದನ್ನು ತಿರಸ್ಕರಿಸಿದ್ದರು. ‘ಧೋನಿ ಮತ್ತು ಶಿಖರ್ ದೇಶೀಯ ಟೂರ್ನಿಯಲ್ಲಿ ಯಾಕೆ ಆಡುತ್ತಿಲ್ಲ ಎಂದು ನಾವು ಬಿಸಿಸಿಐಯನ್ನು ಕೇಳಬೇಕಿದೆ. ಇಬ್ಬರೂ ಸದ್ಯಕ್ಕೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿಲ್ಲ. ಹೀಗಿರುವಾಗ ಇಬ್ಬರಿಗೂ ದೇಶೀಯ ಕ್ರಿಕೆಟ್ ನಿಂದ ವಿನಾಯಿತಿ ನೀಡಿರುವುದೇಕೆ’ ಎಂದು ಗವಾಸ್ಕರ್ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ