ಏಷ್ಯಾ ಕಪ್ ಗೆ ಟೀಂ ಇಂಡಿಯಾ ಆಯ್ಕೆ ತಡವಾಗಲು ಕಾರಣ ಯಾರು ಗೊತ್ತಾ?

ಮಂಗಳವಾರ, 15 ಆಗಸ್ಟ್ 2023 (16:26 IST)
ಮುಂಬೈ: ಆಗಸ್ಟ್ 30 ರಿಂದ ಆರಂಭವಾಗಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಟೀಂ ಇಂಡಿಯಾ ಆಯ್ಕೆ ತಡವಾಗಲು ಕಾರಣವೇನು ಗೊತ್ತಾ?

ಏಷ್ಯಾ ಕಪ್ ನಲ್ಲಿ ಒಟ್ಟು 6 ತಂಡಗಳು ಭಾಗಿಯಾಗುತ್ತಿವೆ. ಈ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ತಂಡಗಳು ತಮ್ಮ ತಂಡ ಪ್ರಕಟಿಸಿವೆ. ಆದರೆ ಭಾರತ, ಅತಿಥೇಯ ಶ್ರೀಲಂಕಾ, ಅಫ್ಘಾನಿಸ್ತಾನ ಇನ್ನೂ ತಂಡ ಪ್ರಕಟಿಸಿಲ್ಲ.

ಭಾರತ ತಂಡ ಆಯ್ಕೆ ತಡವಾಗಲು ಕಾರಣ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್. ಟೀಂ ಇಂಡಿಯಾ ಆಯ್ಕೆ ಸಮಿತಿ ಈ ಇಬ್ಬರು ಸ್ಟಾರ್ ಆಟಗಾರರ ಫಿಟ್ನೆಸ್ ವರದಿಗಾಗಿ ಕಾಯುತ್ತಿದೆ. ಈ ಇಬ್ಬರು ಫಿಟ್ ಆದರೆ ಇಬ್ಬರನ್ನೂ ಏಷ್ಯಾ ಕಪ್ ತಂಡಕ್ಕೆ ಆಯ್ಕೆ ಮಾಡುವ ಉದ್ದೇಶದಿಂದ ತಂಡದ ಆಯ್ಕೆ ತಡವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ