ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಲಷ್ಟೇ ಶಕ್ತವಾಯಿತು. ರೇಣುಕಾ ಸಿಂಗ್, ರಾಧಾ ಯಾದವ್ ದಾಳಿಗೆ ತತ್ತರಿಸಿದ ಬಾಂಗ್ಲಾ ರನ್ ಗಳಿಸಲು ತಿಣುಕಾಡಿತು. ಬಾಂಗ್ಲಾ ಪರ ನಾಯಕಿ ನಿಗರ್ ಸುಲ್ತಾನ 32 ರನ್ ಗಲಿಸಿದರೆ ಶೊಮಾ ಅಕ್ತೆರ್ 19 ರನ್ ಗಳಿಸಿದರು.
ಈ ಸುಲಭ ಮೊತ್ತ ಬೆನ್ನತ್ತಿದ ಭಾರತಕ್ಕೆ ಭಾರತದ ಆರಂಭಿಕ ಜೋಡಿ ಸ್ಮೃತಿ ಮಂಧಾನಾ ಮತ್ತು ಶಫಾಲಿ ವರ್ಮ ಭರ್ಜರಿ ಆರಂಭ ನೀಡಿದರು. ಬಾಂಗ್ಲಾ ಬೌಲರ್ ಗಳನ್ನು ಬೆಂಡೆತ್ತಿದ ಈ ಜೋಡಿ ಮುರಿಯದ ಮೊದಲ ವಿಕೆಟ್ ಗೆ 83 ರನ್ ಗಳ ಜೊತೆಯಾಟವಾಡಿತು. ಸ್ಮೃತಿ 39 ಎಸೆತಗಳಿಂದ 55 ರನ್ ಗಳಿಸಿದರೆ ಶಫಾಲಿ 28 ಎಸೆತಗಳಿಂದ 26 ರನ್ ಗಳಿಸಿದರು. ಕೊನೆಯಲ್ಲಿ ಬೌಂಡರಿ ಮೂಲಕ ಸ್ಮೃತಿ ಭಾರತವನ್ನು ಫೈನಲ್ ಗೆ ತಲುಪಿಸಿದರು.