ವಿಶ್ವಕಪ್ 2019: ದೊಡ್ಡ ಮೊತ್ತವನ್ನೂ ಯಶಸ್ವಿಯಾಗಿ ಬೆನ್ನಟ್ಟಿದ ‘ದುರ್ಬಲ’ ಬಾಂಗ್ಲಾದೇಶ
ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತ್ತು. ಶೈ ಹೊಪ್ 96 ರನ್ ಗಳಿಸಿದರೆ ಹೆಟ್ ಮೈರ್ 50 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಆರಂಭದಿಂದಲೂ ವಿಕೆಟ್ ಜತೆಗೆ ರನ್ ಗತಿಯನ್ನೂ ಕಾಯ್ದುಕೊಂಡಿತು. ಅಂತಿಮವಾಗಿ ಕೇವಲ 41.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 322 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 99 ಎಸೆತಗಳಲ್ಲಿ 124 ರನ್ ಮತ್ತು ಲಿಟನ್ ದಾಸ್ ಅಜೇಯ 94 ರನ್ ಬಾರಿಸಿ ಗೆಲುವಿನ ರೂವಾರಿಯಾದರು.