ವಿಶ್ವಕಪ್ 2019: ಭಾರತೀಯ ಅಭಿಮಾನಿಗಳ ಬೆಂಬಲಕ್ಕೆ ಖುಷಿಯಾದ ವಿರಾಟ್ ಕೊಹ್ಲಿ

ಶನಿವಾರ, 29 ಜೂನ್ 2019 (09:16 IST)
ಲಂಡನ್: ಭಾರತ ಎಲ್ಲೇ ಕ್ರಿಕೆಟ್ ಆಡಲಿ, ಮೈದಾನ ತುಂಬಿ ತುಳುಕುತ್ತಿರುತ್ತದೆ. ಅಭಿಮಾನಿಗಳ ಈ ಅಭಿಮಾನ ನಾಯಕ ವಿರಾಟ್ ಕೊಹ್ಲಿಯ ಹೃದಯ ತುಂಬಿಬರುವಂತೆ ಮಾಡಿದೆ.


ಮ್ಯಾಂಚೆಸ್ಟರ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೂ ಮೈದಾನವಿಡೀ ನೀಲಿ ಬಣ್ಣದ ಭಾರತೀಯ ಸಮವಸ್ತ್ರವನ್ನು ಧರಿಸಿ ಭಾರತೀಯ ತಂಡವನ್ನು ಬೆಂಬಲಿಸಿದ ಅಭಿಮಾನಿಗಳನ್ನು ನೋಡಿ ವಿರಾಟ್ ಕೊಹ್ಲಿ ಖುಷಿಯಾಗಿದ್ದಾರೆ.

ಟ್ವಿಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕೊಹ್ಲಿ ಇದು ಟೀಂ ಗೆಲುವು ಎಂದು ಅಭಿಮಾನಿಗಳನ್ನೂ ಸೇರಿಸಿ ಅಭಿನಂದಿಸಿದ್ದಾರೆ. ‘ಫುಟ್ ಬಾಲ್ ಪಂದ್ಯದಲ್ಲಿ ಹೇಗೆ ನನಗೆ ಗೊತ್ತಿಲ್ಲ. ಆದರೆ ಮ್ಯಾಂಚೆಸ್ಟರ್ ನಲ್ಲಿ ನಿನ್ನೆ ಮೈದಾನವಿಡೀ ಬ್ಲೂ ಕಲರ್ ಇತ್ತು. ಇದು ತಂಡದ ಗೆಲುವು’ ಎಂದು ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ