ರವಿಚಂದ್ರನ್ ಅಶ್ವಿನ್, ವಿರಾಟ್ ಕೊಹ್ಲಿ ಮಾಡಲಿದ್ದಾರೆ ವಿಶಿಷ್ಟ ದಾಖಲೆ

ಭಾನುವಾರ, 19 ನವೆಂಬರ್ 2023 (08:50 IST)
ಮುಂಬೈ: ಈ ಬಾರಿ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಭಾಗವಾಗಿರುವ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ವಿಶಿಷ್ಟ ದಾಖಲೆ ಮಾಡಲಿದ್ದಾರೆ.

ಈ ಇಬ್ಬರೂ ಆಟಗಾರರು ಈ ಹಿಂದೆ ಧೋನಿ ನೇತೃತ್ವದಲ್ಲಿ ಭಾರತ ಗೆದ್ದಿದ್ದ 2011 ರ ವಿಶ್ವಕಪ್ ತಂಡದ ಭಾಗವಾಗಿದ್ದರು. ಇದೀಗ ಮತ್ತೊಮ್ಮೆ ವಿಶ್ವಕಪ್ ತಂಡವನ್ನು ಇಬ್ಬರೂ ಪ್ರತಿನಿಧಿಸುತ್ತಿದ್ದಾರೆ. ಈ ಪೈಕಿ ಅಶ್ವಿನ್ ಮೊದಲ ಪಂದ್ಯ ಮಾತ್ರ ಆಡಿದ್ದಾರೆ. ಇಂದಿನ ಫೈನಲ್ ಪಂದ್ಯದಲ್ಲೂ ಅವರು ಆಡುವುದು ಅನುಮಾನವಾಗಿದೆ. ಹಾಗಿದ್ದರೂ ಎರಡು ವಿಶ್ವಕಪ್ ಫೈನಲ್ ನಲ್ಲಿ ತಂಡ ಪ್ರತಿನಿಧಿಸಿದ ದಾಖಲೆ ಮಾಡಲಿದ್ದಾರೆ.

ಒಂದು ವೇಳೆ ಈ ವಿಶ್ವಕಪ್ ನ್ನು ಭಾರತ ಗೆಲ್ಲಲು ಯಶಸ್ವಿಯಾದರೆ ವಿರಾಟ್ ಕೊಹ್ಲಿ ಎರಡು ಬಾರಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಹೆಗ್ಗಳಿಕೆ ಮಾಡಲಿದ್ದಾರೆ. ಭಾರತದ ಯಾವುದೇ ಕ್ರಿಕೆಟ್ ದಿಗ್ಗಜರೂ ಈ ದಾಖಲೆ ಮಾಡಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ ಸದಾ ಅದ್ಭುತ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಹೀಗಾಗಿ ಇಂದಿನ ಪಿಚ್ ಬೌಲರ್ ಗಳಿಗೆ ನೆರವು ನೀಡುತ್ತಿದ್ದರೆ ಅಶ್ವಿನ್ ರನ್ನು ಆಡಿಸಬೇಕು ಎಂದು ಅಭಿಮಾನಿಗಳಿಂದ ಒತ್ತಾಯ ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ