ಭಾರತೀಯ ಪ್ರೇಕ್ಷಕರ ಸದ್ದಡಗಿಸುವುದಕ್ಕಿಂತ ಖುಷಿ ಬೇರೊಂದಿಲ್ಲ: ಆಸೀಸ್ ನಾಯಕ ಕ್ಯುಮಿನ್ಸ್

ಶನಿವಾರ, 18 ನವೆಂಬರ್ 2023 (17:33 IST)
Photo Courtesy: Twitter
ಅಹಮ್ಮದಾಬಾದ್: ಭಾರತ ವಿರುದ್ಧ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ಮುನ್ನ ಅತಿಥೇಯ ತಂಡಕ್ಕೆ ಸಿಗುತ್ತಿರುವ ಬೆಂಬಲದ ಬಗ್ಗೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕ್ಯುಮಿನ್ಸ್ ಮಾತನಾಡಿದ್ದಾರೆ.

ವಿಶ್ವದ ಬೃಹತ್ ಕ್ರೀಡಾಂಗಣವಾದ ಅಹಮ್ಮದಾಬಾದ್ ನಲ್ಲಿ ನಾಳೆ ಒಂದೂವರೆ ಲಕ್ಷ ಪ್ರೇಕ್ಷಕರು ಫೈನಲ್ ಪಂದ್ಯ ವೀಕ್ಷಿಸಲಿದ್ದಾರೆ. ಇವರಲ್ಲಿ ಹೆಚ್ಚಿನವರೂ ಭಾರತೀಯ ಸಮರ್ಥಕರೇ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರೂ ಈ ಪಂದ್ಯವನ್ನು ಭಾರತವೇ ಗೆಲ್ಲಲಿದೆ ಎಂಬ ಭರವಸೆಯಲ್ಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಸೀಸ್ ನಾಯಕ ‘ಪ್ರೇಕ್ಷಕರು ಖಂಡಿತವಾಗಿಯೂ ಹೆಚ್ಚಿನವರು ಭಾರತವನ್ನು ಬೆಂಬಲಿಸಲಿದ್ದಾರೆ. ಆದರೆ ಅಷ್ಟು ದೊಡ್ಡ ಪ್ರೇಕ್ಷಕರ ಸದ್ದಡಗಿಸುವುದೇ ಒಂದು ರೀತಿಯ ಖುಷಿ. ಈಗಿನ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡಬೇಕಿದೆ’ ಎಂದಿದ್ದಾರೆ.

ಆಸ್ಟ್ರೇಲಿಯಾ ನಾಯಕನ ಈ ಹೇಳಿಕೆ ಭಾರತೀಯ ಪ್ರೇಕ್ಷಕರನ್ನು ಕೆರಳಿಸಲಿದೆ. ನಾಳೆಯ ಪಂದ್ಯಕ್ಕೆ ಬಹುತೇಕರು ಭಾರತೀಯ ಆಟಗಾರರನ್ನೇ ಬೆಂಬಲಿಸುವುದು ಖಚಿತ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ