ವಿಶ್ವಕಪ್ 2023 ರಲ್ಲಿ ಮೊದಲ ಬಾರಿಗೆ ಆಲೌಟ್ ಆದ ಟೀಂ ಇಂಡಿಯಾ

ಭಾನುವಾರ, 19 ನವೆಂಬರ್ 2023 (18:16 IST)
ಅಹಮ್ಮದಾಬಾದ್: ಏಕದಿನ ವಿಶ್ವಕಪ್ ನಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 240 ಕ್ಕೆ ಆಲೌಟ್ ಆಯಿತು.

ಇದುವರೆಗೆ ಈ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಯಾವುದೇ ಪಂದ್ಯದಲ್ಲೂ ಆಲೌಟ್ ಆಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಈ ಕೂಟದಲ್ಲಿ ಆಲೌಟ್ ಆಗಿದೆ. ಅದೂ ಫೈನಲ್ ನಲ್ಲಿ ಎನ್ನುವುದು ವಿಶೇಷ.

ಇನ್ನು, ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ 5  ಕ್ಯಾಚ್ ಪಡೆಯುವ ಮೂಲಕ ವಿಶ್ವಕಪ್ ಫೈನಲ್ ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್ ಎಂಬ ದಾಖಲೆ ಮಾಡಿದರು. ಇದೀಗ ಟೀಂ ಇಂಡಿಯಾ ಗೆಲುವು ಬೌಲರ್ ಗಳ ಕೈಯಲ್ಲಿದೆ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ