ಸೀರೆಯಲ್ಲಿ ಮಿಂಚಿದ ಆರ್‌ಸಿಬಿ ಆಟಗಾರ್ತಿಯರು: ನಮ್ಮ ಬೆಡಗಿ ಸ್ಮೃತಿ ಎಲ್ಲಿ ಎಂದ ಫ್ಯಾನ್ಸ್‌

Sampriya

ಶುಕ್ರವಾರ, 7 ಮಾರ್ಚ್ 2025 (18:09 IST)
Photo Courtesy X
ಬೆಂಗಳೂರು: ಮಹಿಳಾ ಪ್ರೀಮಿಯರ್‌ ಲೀಗ್ ಟಿ20ಯ ನಾಳಿನ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯಾಟ ಆರ್‌ಸಿಬಿಗೆ ಮಾಡು ಇಲ್ಲವೇ ಮಡಿಯಂತಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ನ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಆಟಗಾರ್ತಿಯರು ಭಾರತದ ಸಾಂ‌ಪ್ರದಾಯಿಕ ಉಡುಪುಗಳನ್ನು ತೊಟ್ಟು ಸಂಭ್ರಮಿಸಿದ್ದಾರೆ.

ಲಖನೌನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಟಗಾರ್ತಿಯರು ಸೀರೆ, ಲೆಹೆಂಗಾ, ಲಂಗ ದಾವಣಿ, ಚೂಡಿದಾರ್‌ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಈ ವೇಳೆ ತೆಗೆದ ಫೋಟೋಗಳಲನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ವಿದೇಶಿ ಆಟಗಾರ್ತಿಯರು ಸೀರೆತೊಟ್ಟು ಭಾರತದ ಸಂಸ್ಕೃತಿಗೆ ಗೌರವಕೊಟ್ಟಿರುವುದಕ್ಕೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಇನ್ನೂ ಈ ಸಮಾರಂಭದಲ್ಲಿ ತಂಡದ ನಾಯಕಿ ಸ್ಮೃತಿ ಮಂದಾನ ಅವರು ಎಲ್ಲಿಯೂ ಕಾಣದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಮೃತಿ ಮಂಧಾನ ಅವರು ಅನುಪಸ್ಥಿತಿ ಬಗ್ಗೆ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಟೂರ್ನಿಯಲ್ಲಿ ಈ ವರೆಗ ಆರು ಪಂದ್ಯಗಳಲ್ಲಿ ಆಡಿರುವ ಆರ್‌ಸಿಬಿ ಮೊದಲೆರಡು ಪಂದ್ಯಗಳಲ್ಲಷ್ಟೇ ಗೆದ್ದಿದೆ. ಉಳಿದೆಲ್ಲ ಪಂದ್ಯಗಳನ್ನೂ ಸೋತು ಪಾಯಿಂಟ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇನ್ನೆರಡು ಪಂದ್ಯಗಳನ್ನು ಕ್ರಮವಾಗಿ ಯಪಿ ವಾರಿಯರ್ಸ್‌ (ಮಾರ್ಚ್‌ 8) ಹಾಗೂ ಮುಂಬೈ ಇಂಡಿಯನ್ಸ್‌ (ಮಾರ್ಚ್‌ 11) ವಿರುದ್ಧ ಆಡಲಿದೆ.

RCB Women's Players in the Indian Traditional look ❤. pic.twitter.com/DcTolw72Ii

— Jay Cricket. (@Jay_Cricket12) March 7, 2025


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ