WPL 2025: ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ

Sampriya

ಮಂಗಳವಾರ, 11 ಮಾರ್ಚ್ 2025 (19:38 IST)
Photo Courtesy X
ಲಖನೌ: ಏಳು ಪಂದ್ಯಗಳಲ್ಲಿ ಸತತ ಐದು ಪಂದ್ಯಗಳನ್ನು ಸೋತು ನಾಕೌಟ್‌ ರೇಸ್‌ನಿಂದ ಹೊರಗುಳಿದಿರುವ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಇಂದು ನಡೆಯುವ ಡಬ್ಯುಪಿಎಲ್‌ ಪಂದ್ಯಾಟದಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ.

ಟಾಸ್‌ ಗೆದ್ದ ಮುಂಬೈ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬ್ಯಾಟ್‌ ಮಾಡುತ್ತಿದೆ.

ಐದು ಪಂದ್ಯಗಳನ್ನು ಸೋತು ಪಾಯಿಂಟ್ಸ್‌ ಪಟ್ಟಿಯಲ್ಲಿ ಆರ್‌ಸಿಬಿ ಕೊನೆಯ ಸ್ಥಾನದಲ್ಲಿದೆ. ಈ ಋತುವಿನ ಕೊನೆಯ ಪಂದ್ಯವನ್ನು ಗೆಲುವಿನೊಂದಿಗೆ ಮುಗಿಸುವ ಪ್ರಯತ್ನದಲ್ಲಿದೆ. ಆರಂಭದ ಎರಡು ಪಂದ್ಯಗಳನ್ನು ಗೆದ್ದು ಬೀಗಿದ ಆರ್‌ಸಿಬಿ, ನಂತರ ಎಲ್ಲ ಪಂದ್ಯಗಳನ್ನು ಸೋತಿತು.

ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು (10) ಅಗ್ರಸ್ಥಾನದಲ್ಲಿದೆ. ಗುಜರಾತ್‌ ಜೈಂಟ್ಸ್‌ (8) ಎರಡನೇ ಸ್ಥಾನದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ