ಡಬ್ಲ್ಯುಪಿಎಲ್ ಫೈನಲ್: ಆರ್ ಸಿಬಿ, ಕನ್ನಡತಿ ಶ್ರೇ ಯಾಂಕ ಪಾಟೀಲ್ ಗೆ ಸಿಕ್ಕ ಬಹುಮಾನ ಮೊತ್ತ

Krishnaveni K

ಸೋಮವಾರ, 18 ಮಾರ್ಚ್ 2024 (07:37 IST)
Photo Courtesy: Twitter
ದೆಹಲಿ: ಡಬ್ಲ್ಯುಪಿಎಲ್ ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಮೆರೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾರೀ ಮೊತ್ತದ ಬಹುಮಾನ ಜೇಬಿಗಿಳಿಸಿಕೊಂಡಿದೆ.

ಡಬ್ಲ್ಯುಪಿಎಲ್ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಹುಮಾನ ಮೊತ್ತವಾಗಿ 6 ಕೋಟಿ ರೂ. ಮತ್ತು ವಿನ್ನರ್ ಟ್ರೋಫಿ ನೀಡಲಾಯಿತು. ಅತ್ತ ಸತತ ಎರಡನೇ ಬಾರಿಗೆ ರನ್ನರ್ ಅಪ್ ಆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ಕೋಟಿ ರೂ. ಬಹುಮಾನ ಮೊತ್ತ ಮತ್ತು ರನ್ನರ್ ಅಪ್ ಟ್ರೋಫಿ ಪಡೆಯಿತು.

ಈ ಬಹುಮಾನ ಮೊತ್ತವನ್ನು ಎಲ್ಲಾ ಆಟಗಾರರೂ ಮತ್ತು ಸಹಾಯಕ ಸಿಬ್ಬಂದಿಗಳು ಹಂಚಿಕೊಳ್ಳಲಿದ್ದಾರೆ. ಇದರ ಹೊರತಾಗಿ ಎಲ್ಲಾ ಟೂರ್ನಿಯಲ್ಲಿ ಅತ್ಯುತ್ತಮ ಸಿಕ್ಸರ್, ಗರಿಷ್ಠ ಸಿಕ್ಸರ್, ಉದಯೋನ್ಮುಖ ತಾರೆ, ಮ್ಯಾನ್ ಅಫ್ ದಿ ಮ್ಯಾಚ್, ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಮ್ಯಾಚ್ ಎಂಬ ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿ ಪಡೆದ ಆಟಗಾರ್ತಿಯರಿಗೆ 1 ಲಕ್ಷ ರೂ. ಮತ್ತು 5 ಲಕ್ಷ ರೂ. ಬಹುಮಾನ ನೀಡಲಾಗಿದೆ.

ಉದಯೋನ್ಮುಖ ತಾರೆಯಾಗಿ ಕನ್ನಡತಿ ಶ್ರೇಯಾಂಕ ಪಾಟೀಲ್ ಗೆ ಬಹುಮಾನ ಸಂದಿದೆ. ಈ ಮೂಲಕ ಅವರು 5 ಲಕ್ಷ ರೂ.ಗಳ ಬಹುಮಾನ ಮೊತ್ತ ಜೇಬಿಗಿಳಿಸಿಕೊಂಡಿದ್ದಾರೆ. ಇದಲ್ಲದೆ, ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ವಿಭಾಗದಲ್ಲಿ ಸೋಫಿ ಮೊಲಿನಕ್ಸ್, ಎಲ್ಲಿಸ್ ಪೆರ್ರಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರಿಗೂ ಅಷ್ಟೇ ಮೊತ್ತದ ಬಹುಮಾನ ಸಿಕ್ಕಿದೆ. ಇನ್ನು ಗರಿಷ್ಠ ಸಿಕ್ಸರ್ ಗಳಿಸಿದ ಡೆಲ್ಲಿ ತಂಡದ ಆಟಗಾರ್ತಿ ಶಫಾಲಿ ವರ್ಮ 1 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ