ಡಬ್ಲ್ಯುಪಿಎಲ್ ಫೈನಲ್ ಪಂದ್ಯಕ್ಕೆ ಹಾಜರಾದ ಸಚಿನ್, ರೋಹಿತ್ ಶರ್ಮಾ ಆಂಡ್ ಟೀಂ

ಸೋಮವಾರ, 27 ಮಾರ್ಚ್ 2023 (07:40 IST)
Photo Courtesy: Twitter
ಮುಂಬೈ: ಡಬ್ಲ್ಯುಪಿಎಲ್ ಫೈನಲ್ ಪಂದ್ಯದಲ್ಲಿ ಮಹಿಳಾ ತಂಡಕ್ಕೆ ಪ್ರೋತ್ಸಾಹ ನೀಡಲು ಮುಂಬೈ ಇಂಡಿಯನ್ಸ್ ಪುರುಷರ ತಂಡ ಹಾಜರಿತ್ತು.

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಗಾಯಗೊಂಡು ಐಪಿಎಲ್ ನಿಂದ ಹೊರಗುಳಿದಿರುವ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ಇಡೀ ತಂಡವೇ ಮೈದಾನದಲ್ಲಿ ಕುಳಿತು ಪಂದ್ಯ ವೀಕ್ಷಿಸಿದೆ. ಇನ್ನು, ಹರ್ಮನ್ ಬಳಗದ ಅತ್ಯುತ್ತಮ ಬೌಲಿಂಗ್, ರನ್ ಗಳಿಕೆ ಸೇರಿದಂತೆ ಪ್ರತಿಯೊಂದಕ್ಕೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದರು.

ಇನ್ನು, ಮುಂಬೈ ಮಾಲಕಿ ನೀತಾ ಅಂಬಾನಿ, ಪುತ್ರ ಕೂಡಾ ಮೈದಾನದಲ್ಲಿ ಹಾಜರಿದ್ದು ತಮ್ಮ ತಂಡಕ್ಕೆ ಚಿಯರ್ ಅಪ್ ಮಾಡುತ್ತಿದ್ದುದು ಕಂಡುಬಂತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ