ಡಬ್ಲ್ಯುಟಿಸಿ ಫೈನಲ್: ವಿಕೆಟ್ ಕಳೆದುಕೊಂಡರೂ ಸುಸ್ಥಿತಿಯಲ್ಲಿ ಆಸೀಸ್

ಗುರುವಾರ, 8 ಜೂನ್ 2023 (17:21 IST)
ದಿ ಓವಲ್: ಡಬ್ಲ್ಯುಟಿಸಿ ಫೈನಲ್ ಪಂದ್ಯದ ಎರಡನೇ ದಿನದ ಭೋಜನ ವಿರಾಮದ ವೇಳೆಗೆ 7 ವಿಕೆಟ್ ಕಳೆದುಕೊಂಡಿರುವ ಆಸೀಸ್ 422 ರನ್ ಗಳಿಸಿ ಸುಸ್ಥಿತಿಯಲ್ಲಿದೆ.

ನಿನ್ನೆ 146 ರನ್ ಗಳಿಸಿ ಅಜೇಯರಾಗುಳಿದಿದ್ದ ಟ್ರಾವಿಸ್ ಹೆಡ್ ಇಂದು 163 ರನ್ ಗಳಿಸಿ ಮೊಹಮ್ಮದ್ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ನಿನ್ನೆ 94 ರನ್ ಗಳಿಸಿ ಅಜೇಯರಾಗುಳಿದಿದ್ದ ಸ್ಟೀವ್ ಸ್ಮಿತ್ ಇಂದು ಶತಕ ಗಳಿಸಿದರು. 121 ರನ್ ಗಳಿಸಿ ಶ್ರಾದ್ಧೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಕ್ಯಾಮರೂನ್ ಗ್ರೀನ್ 6 ರನ್ ಗಳಿಸಿ ಔಟಾದರೆ ಮಿಚೆಲ್ ಸ್ಟಾರ್ಕ್ ಅಕ್ಸರ್ ಪಟೇಲ್ ರಿಂದಾಗಿ ರನೌಟ್ ಆದರು. ಹೀಗಾಗಿ ಆಸೀಸ್ 4 ವಿಕೆಟ್ ಗಳನ್ನು ನಿಯಮಿತವಾಗಿ ಕಳೆದುಕೊಂಡಿತು.

ಆದರೆ ಈಗಾಗಲೇ ಆಸೀಸ್ ಮೊತ್ತ 400 ರ ಗಡಿ ದಾಟಿದೆ. ಇದು ಪ್ಲಸ್ ಪಾಯಿಂಟ್ ಆಗಲಿದೆ. ಭಾರತದ ಪರ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಶ್ರಾದ್ಧೂಲ್ ಠಾಕೂರ್ ತಲಾ 2 ವಿಕೆಟ್ ಗಳಿಸಿದರು. ರವೀಂದ್ರ ಜಡೇಜಾ, ಉಮೇಶ್ ಯಾದವ್ ಇನ್ನೂ ವಿಕೆಟ್ ಖಾತೆ ತೆರೆದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ