WTC Finals: ಕುತೂಹಲ ಘಟ್ಟದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನ್

ಬುಧವಾರ, 23 ಜೂನ್ 2021 (09:07 IST)
ಸೌಥಾಂಪ್ಟನ್: ಮಳೆಯಿಂದಾಗಿ ಫಲಿತಾಂಶವೇ ಬರದು ಎಂದುಕೊಂಡಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಈಗ ಕುತೂಹಲದ ಘಟ್ಟ ತಲುಪಿದೆ.


ನಿನ್ನೆ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 249 ಕ್ಕೆ ಆಲೌಟ್ ಆಗುವ ಮೂಲಕ 32 ರನ್ ಗಳ ಅಲ್ಪ ಮುನ್ನಡೆ ಪಡೆಯಿತು. ಭಾರತದ ಪರ ಉತ್ತಮ ಬೌಲಿಂಗ್ ಸಂಘಟಿಸಿದ ಮೊಹಮ್ಮದ್ ಶಮಿ 4 ವಿಕೆಟ್ ಕಬಳಿಸಿದರು.

ದ್ವಿತೀಯ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಶಬ್ನಂ ಗಿಲ್ ರೂಪದಲ್ಲಿ ಆಘಾತ ಸಿಕ್ಕಿತು. ಗಿಲ್ ಕೇವಲ 8 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಮತ್ತೆ ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿದರು. 30 ರನ್ ಗಳಿಸಿದ್ದಾಗ ಟಿಮ್ ಸೌಥಿ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯು ಆಗಿ ನಿರ್ಗಮಿಸಿದರು. ಇದೀಗ 12 ರನ್ ಗಳಿಸಿರುವ ಚೇತೇಶ್ವರ ಪೂಜಾರ ಮತ್ತು 8 ರನ್ ಗಳಿಸಿರುವ ವಿರಾಟ್ ಕೊಹ್ಲಿ ಕ್ರೀಸ್ ನಲ್ಲಿದ್ದಾರೆ. ಇಂದು ಮೀಸಲು ದಿನವಾಗಿದ್ದು ಅಂತಿಮ ದಿನದ ಪಂದ್ಯ ನಡೆಯಲಿದೆ.

ಒಂದು ವೇಳೆ ನ್ಯೂಜಿಲೆಂಡ್ ಭಾರತವನ್ನು ಭೋಜನ ವಿರಾಮದ ಒಳಗೇ ಆಲೌಟ್ ಮಾಡಲು ಯಶಸ್ವಿಯಾದರೆ ಫಲಿತಾಂಶ ನಿರೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ