ತಂದೆಯ ಜೊತೆ ವಿಡಿಯೋ ಕಾಲ್ ನಲ್ಲೇ ಕಣ್ಣೀರು ಹಾಕಿದ ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್ ಗೆ ಇದು ಪದಾರ್ಪಣೆಯ ಪಂದ್ಯವಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದು ಎರಡು ದಿನ ಬ್ಯಾಟಿಂಗ್ ಮಾಡಿದ ಯಶಸ್ವಿ 171 ರನ್ ಗಳಿಸಿ ಔಟಾಗಿದ್ದರು.
ಎರಡನೇ ದಿನ ಶತಕ ಗಳಿಸಿದ ಮೇಲೆ ತಮ್ಮ ತಂದೆಗೆ ವಿಡಿಯೋ ಕಾಲ್ ಮಾಡಿದ್ದ ಯಶಸ್ವಿ ಭಾವುಕರಾಗಿ ಕಣ್ಣೀರು ಹಾಕಿದ್ದರಂತೆ. ಬಡತನದಲ್ಲೇ ಬೆಳೆದಿದ್ದ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದ ಸಂತಸದಲ್ಲಿ ತಂದೆಯ ಜೊತೆ ಮಾತನಾಡುವಾಗ ತೀರಾ ಭಾವುಕರಾಗಿದ್ದರಂತೆ. ಇದೇ ಕಾರಣಕ್ಕೆ ಅವರಿಗೆ ಮಾತನಾಡಲೂ ಸಾಧ್ಯವಾಗಿರಲಿಲ್ಲ. ಕೊನೆಗೆ ನನ್ನ ಶತಕದಿಂದ ನಿಮಗೆ ಖುಷಿಯಾಯಿತೇ? ಎಂದು ಕೇಳಿದ್ದಾರೆ ಎಂದು ಅವರ ತಂದೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.