ಕುಡಿದ ಮತ್ತಿನಲ್ಲಿ ನೆಹ್ರಾ-ಯಜುವೇಂದ್ರ ಚಾಹಲ್ ಸಂಭಾಷಣೆ ವೈರಲ್

ಮಂಗಳವಾರ, 7 ಜೂನ್ 2022 (17:04 IST)
ಮುಂಬೈ: ಮೊನ್ನೆಯಷ್ಟೇ ಮುಕ್ತಾಯವಾದ ಐಪಿಎಲ್ 2022 ರ ಫೈನಲ್ ಪಂದ್ಯವನ್ನು ಗೆದ್ದ ಬಳಿಕ ಗುಜರಾತ್ ಟೈಟನ್ಸ್ ತಂಡದ ಕೋಚ್ ಆಶಿಷ್ ನೆಹ್ರಾ ಮತ್ತು ಬೌಲರ್ ಯಜುವೇಂದ್ರ ಚಾಹಲ್ ನಡೆದುಕೊಂಡ ರೀತಿ ಈಗ ಎಲ್ಲೆಡೆ ವೈರಲ್ ಆಗಿದೆ.

ಪಂದ್ಯ ಗೆದ್ದ ಖುಷಿಯಲ್ಲಿ ರಾಜಸ್ಥಾನ್ ಆಟಗಾರರು ಪಾರ್ಟಿ ಮಾಡಿದ್ದರು. ಈ ಪಾರ್ಟಿ ಬಳಿಕ ತಂಡದ ಆಟಗಾರರು ತೆರಳುವಾಗ ಚಾಹಲ್ ಮತ್ತು ಆಶಿಷ್ ನೆಹ್ರಾ ಕುಡಿದ ಮತ್ತಿನಲ್ಲಿ ಸಂಭಾಷಣೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.

ಚಾಹಲ್ ತೂರಾಡುತ್ತಾ ಅಭಿಮಾನಿಗೆ ಸೆಲ್ಫೀ ಕೊಟ್ಟು ಪತ್ನಿ ಜೊತೆ ಕಾರಿನಲ್ಲಿ ತೆರಳಲು ಮುಂದಾದಾಗ ಬಳಿ ಬರುವ ನೆಹ್ರಾ ಬಸ್ ನಲ್ಲಿ ಬರುವಂತೆ ಒತ್ತಾಯಿಸುತ್ತಾರೆ. ಆಗ ಚಾಹಲ್ ನಾನು ಬರಲ್ಲ, ಪತ್ನಿ ಜೊತೆ ಕಾರಿನಲ್ಲಿ ತೆರಳುತ್ತೇನೆ. ಪತ್ನಿಯನ್ನು ಎಲ್ಲಿ ಬಿಡಲಿ ಎನ್ನುತ್ತಾರೆ. ಇದಕ್ಕೆ ಪತ್ನಿಯನ್ನೂ ಬಸ್ ನಲ್ಲಿ ಕರೆದುಕೊಂಡು ಬಾ ಎಂದು ನೆಹ್ರಾ ಹೇಳುತ್ತಾರೆ. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ