ಪತಿಯನ್ನು ಎತ್ತಿ ಬಿಸಾಕೋದು, ಗೆಳೆಯನನ್ನು ಅಪ್ಪಿ ಪೋಸ್ ಕೊಡೋದು: ಯಜುವೇಂದ್ರ ಚಾಹಲ್ ಪತ್ನಿ ಟ್ರೋಲ್

Krishnaveni K

ಸೋಮವಾರ, 4 ಮಾರ್ಚ್ 2024 (09:02 IST)
Photo Courtesy: Instagram

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಪತ್ನಿ ಧನಶ್ರೀ ವರ್ಮ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಆದರೆ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಗೆಳೆಯನನ್ನು ತಬ್ಬಿಕೊಂಡಿರುವ ಪೋಸ್ ಈಗ ಎಲ್ಲರ ಟೀಕೆಗೆ ಗುರಿಯಾಗಿದೆ.


ಚಾಹಲ್ ಪತ್ನಿ ಧನಶ್ರೀ ವರ್ಮ ಡ್ಯಾನ್ಸರ್ ಎನ್ನುವುದು ಎಲ್ಲರಿಗೂ ಗೊತ್ತು. ಆಕೆ ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಗೆಳೆಯ, ಕೊರಿಯಾಗ್ರಫರ್ ಪ್ರತೀಕ್ ಉಟೇಕರ್ ಜೊತೆ ತೆಗೆಸಿಕೊಂಡಿರುವ ಫೋಟೋ ಪ್ರಕಟಿಸಿದ್ದರು. ಈ ಫೋಟದಲ್ಲಿ ಧನಶ್ರೀಯನ್ನು ಪ್ರತೀಕ್ ತಬ್ಬಿಕೊಂಡಿದ್ದಾರೆ. ಈ ಫೋಟೋ ನೋಡಿ ನೆಟ್ಟಿಗರು ಕಿಡಿ ಕಾರಿದ್ದಾರೆ.

ಎಷ್ಟೇ ಉತ್ತಮ ಗೆಳೆಯನೇ ಆದರೂ ಧನಶ್ರೀ ಈ ರೀತಿ ಪ್ರೇಮಿಯನ್ನು ತಬ್ಬಿಕೊಂಡು ಪೋಸ್ ಕೊಡುವಂತೆ ಗೆಳೆಯನನ್ನು ತಬ್ಬಿಕೊಂಡಿರುವುದು ಸರಿಯೇ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಮತ್ತೆ ಕೆಲವರು ಇದನ್ನೆಲ್ಲಾ ಚಾಹಲ್ ಹೇಗೆ ಸಹಿಸಿಕೊಳ್ಳುತ್ತಾರೋ ಪಾಪ ಎಂದಿದ್ದಾರೆ.

ಇನ್ನೊಂದು ರೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ರೀಲ್ಸ್ ನಲ್ಲಿ ಚಾಹಲ್ ರನ್ನು ಎತ್ತಿಕೊಂಡು ಧನಶ್ರೀ ತಿರುಗಿಸುತ್ತಿರುವ ದೃಶ್ಯವಿದೆ. ಹೀಗಾಗಿ ಪತಿಯನ್ನು ಎತ್ತಿ ಬಿಸಾಕೋದು, ಗೆಳೆಯನನ್ನು ತಬ್ಬಿ ಪೋಸ್ ಕೊಡೋದು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇವರನ್ನು ನೋಡುತ್ತಿದ್ದರೆ ಚಾಹಲ್ ಕತೆಯೂ ದಿನೇಶ್ ಕಾರ್ತಿಕ್ ಥರಾನೇ ಆಗುವ ಲಕ್ಷಣವಿದೆ ಎಂದಿದ್ದಾರೆ. ದಿನೇಶ್ ಕಾರ್ತಿಕ್ ಮಾಜಿ ಪತ್ನಿ ನಿಖಿತಾ ಪತಿಗೇ ಕೊಕ್ ಕೊಟ್ಟು ಕ್ರಿಕೆಟಿಗ ಮುರಳಿ ವಿಜಯ್ ರನ್ನು ಮದುವೆಯಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ