ವೃತ್ತಿಬದುಕಿನ ಕೊನೆಯ ಕ್ಷಣದಲ್ಲಿ ನನಗೆ ಹೀಗೆ ಮಾಡಬಾರದಿತ್ತು! ಯುವರಾಜ್ ಸಿಂಗ್ ಆಕ್ರೋಶ
ಯುವರಾಜ್ ಸಿಂಗ್ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು ಎಂಬ ಸುದ್ದಿಯಿತ್ತು. ಆದರೆ ಈ ಬಗ್ಗೆ ಇದೀಗ ಮಾತನಾಡಿರುವ ಯುವರಾಜ್ ನಾನು ಯೋ ಯೋ ಟೆಸ್ಟ್ ನಲ್ಲಿ ಪಾಸಾಗಿದ್ದರೂ ನನ್ನನ್ನು ಮೂಲೆಗುಂಪು ಮಾಡಲಾಯಿತು.
ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನನ್ನ ಜತೆ ಸರಿಯಾಗಿ ಸಂವಹನ ನಡೆಸಲಿಲ್ಲ. ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯ ಪ್ರಶಸ್ತಿ ಸ್ವೀಕರಿಸಿದ ಮೇಲೂ ಮುಂದಿನ ವೆಸ್ಟ್ ಇಂಡೀಸ್ ಸರಣಿಗೆ ನನ್ನನ್ನು ಆಯ್ಕೆ ಮಾಡದೇ ಇದ್ದಾಗ ಅಚ್ಚರಿಯಾಯಿತು. ಅದನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ’ ಎಂದು ಯುವ ಬಹಿರಂಗಪಡಿಸಿದ್ದಾರೆ.