ದುಬೈ: ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರಾಯಭಾರಿಯಾಗಿ ನೇಮಕವಾಗಿದ್ದಾರೆ.
2007 ರ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಯುವರಾಜ್ ಸಿಂಗ್ ಪ್ರಧಾನ ಪಾತ್ರ ವಹಿಸಿದ್ದರು. ಯವರಾಜ್ ಸಿಂಗ್ ಟಿ20 ವಿಶ್ವಕಪ್ ನಲ್ಲಿ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದ ಏಕೈಕ ಜಾಗತಿಕ ಕ್ರಿಕೆಟಿಗ. 2007 ರಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಈ ದಾಖಲೆ ಮಾಡಿದ್ದರು. ಇದನ್ನು ಇಂದಿಗೂ ಯಾರೂ ಅಳಿಸಲಾಗಿಲ್ಲ.
ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್, ಒಲಿಂಪಿಕ್ ಗೋಲ್ಡ್ ಮೆಡಲಿಸ್ಟ್ ಉಸೇನ್ ಬೋಲ್ಟ್ ಕೂಡಾ ಟಿ20 ವಿಶ್ವಕಪ್ ಟೂರ್ನಿಯ ರಾಯಭಾರಿಗಳಾಗಿದ್ದಾರೆ. ಅವರ ಜೊತೆಗೆ ಯುವರಾಜ್ ಸಿಂಗ್ ಗೂ ಈ ಗೌರವ ಸಿಕ್ಕಿರುವುದು ವಿಶೇಷ. ಇದೀಗ ಟಿ20 ವಿಶ್ವಕಪ್ ಟೂರ್ನಿಯ ಪ್ರಚಾರ ಕಾರ್ಯದಲ್ಲಿ ಯುವರಾಜ್ ಸಿಂಗ್ ಸಕ್ರಿಯರಾಗಿ ಭಾಗವಹಿಸಲಿದ್ದಾರೆ.
ಟಿ20 ವಿಶ್ವಕಪ್ ಎಂದರೆ ನನ್ನ ಅಚ್ಚುಮೆಚ್ಚಿನ ಕ್ಷಣಗಳಲ್ಲಿ ಆರು ಎಸೆತಕ್ಕೆ ಆರು ಸಿಕ್ಸರ್ ಸಿಡಿಸಿರುವುದು ಸೇರಿದೆ. ನನಗೆ ಇಂತಹದ್ದೊಂದು ಗೌರವ ಸಿಕ್ಕಿರುವುದಕ್ಕೆ ಅಭಾರಿಯಾಗಿದ್ದೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.