ನಾನಾಗಿದ್ದರೆ ರೋಹಿತ್ ಶರ್ಮಾಗೆ ಇನ್ನೊಂದು ಚಾನ್ಸ್ ಕೊಡುತ್ತಿದ್ದೆ: ಯುವರಾಜ್ ಸಿಂಗ್
ನಾನಾಗಿದ್ದರೆ ರೋಹಿತ್ ಶರ್ಮಾಗೆ ಇನ್ನೊಂದು ಆವೃತ್ತಿಗೆ ನಾಯಕನಾಗಿ ತಂಡ ಮುನ್ನಡೆಸಲು ಅವಕಾಶ ಕೊಡುತ್ತಿದ್ದೆ. ಹಾರ್ದಿಕ್ ಪಾಂಡ್ಯರನ್ನು ಉಪನಾಯಕನಾಗಿ ನೇಮಿಸುತ್ತಿದ್ದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ರೋಹಿತ್ ಶರ್ಮಾ ಐಪಿಎಲ್ ನ ಯಶಸ್ವೀ ನಾಯಕ ಎಂದಿದ್ದಾರೆ.
5 ಬಾರಿ ಐಪಿಎಲ್ ಗೆದ್ದಿರುವ ರೋಹಿತ್ ಶರ್ಮಾ ಐಪಿಎಲ್ ನ ಯಶಸ್ವೀ ನಾಯಕ. ಅವರನ್ನು ಕಿತ್ತು ಹಾಕಿದ್ದು ನಿಜಕ್ಕೂ ದೊಡ್ಡ ನಿರ್ಧಾರ. ನಾನಾಗಿದ್ದರೆ ಹಾರ್ದಿಕ್ ರನ್ನು ಕರೆತಂದಂತೆ ಯಾರನ್ನೇ ತಂಡಕ್ಕೆ ಕರೆತಂದಿದ್ದರೂ ರೋಹಿತ್ ಗೆ ಇನ್ನೊಂದು ಆವೃತ್ತಿಯಲ್ಲಿ ನಾಯಕನಾಗಿ ಮುಂದುವರಿಯಲು ಅವಕಾಶ ನೀಡುತ್ತಿದ್ದೆ. ಹಾರ್ದಿಕ್ ಗೆ ಉಪನಾಯಕನ ನೀಡುತ್ತಿದ್ದೆ. ಆಗ ತಂಡ ಹೇಗೆ ಸಕ್ಸಸ್ ಪಡೆಯುತ್ತದೆ ನೋಡಬಹುದಿತ್ತು ಎಂದಿದ್ದಾರೆ.
ಅವರ ಈ ಹೇಳಿಕೆ ರೋಹಿತ್ ಅಭಿಮಾನಿಗಳಿಗೆ ಭಾರೀ ಮೆಚ್ಚುಗೆಯಾಗಿದೆ. ಯುವರಾಜ್ ಸಿಂಗ್ ಮೊದಲಿನಿಂದಲೂ ರೋಹಿತ್ ರನ್ನು ಬೆಂಬಲಿಸುತ್ತಲೇ ಇದ್ದಾರೆ. ರೋಹಿತ್ ಕೂಡಾ ಯುವಿ ಮೇಲೆ ಸ್ವಲ್ಪ ಹೆಚ್ಚೇ ಗೌರವ ಹೊಂದಿದ್ದಾರೆ. ಇದೀಗ ಮತ್ತೊಮ್ಮೆ ರೋಹಿತ್ ರನ್ನು ಬೆಂಬಲಿಸಿ ಯುವಿ ಮಾತನಾಡಿರುವುದು ಅಭಿಮಾನಿಗಳಿಗೆ ಇಷ್ಟವಾಗಿದೆ.