‘ಟೀಂ ಇಂಡಿಯಾ ಕ್ರಿಕೆಟಿಗರನ್ನು ಎಷ್ಟು ಬೇಕಾದರೂ ಸ್ಲೆಡ್ಜಿಂಗ್ ಮಾಡಿ’
ಬುಧವಾರ, 15 ಫೆಬ್ರವರಿ 2017 (09:58 IST)
ಮುಂಬೈ: ಆಸ್ಟ್ರೇಲಿಯಾ ಕ್ರಿಕೆಟಿಗರು ಅರ್ಧದಷ್ಟು ಪಂದ್ಯ ಗೆಲ್ಲುವುದು ಮಾನಸಿಕವಾಗಿಯೇ. ಎದುರಾಳಿಗಳನ್ನು ಮಾತಿನಲ್ಲಿ ಕೆಣಕಿ ಅವರ ಏಕಾಗ್ರತೆಗೆ ಭಂಗ ತರುವುದು ಅವರ ಜಾಯಮಾನ. ಮುಂಬರುವ ಭಾರತ ಪ್ರವಾಸದಲ್ಲೂ ಹೀಗೇ ಮಾಡಿ ಎಂದು ಆಸೀಸ್ ನಾಯಕ ಸ್ಟೀವ್ ಸ್ಮಿತ್ ತನ್ನ ಹುಡುಗರಿಗೆ ಹೇಳಿದ್ದಾರೆ.
“ನಮ್ಮ ಆಟಗಾರರು ಚೆನ್ನಾಗಿ ಆಡುತ್ತಾರೆ. ಅದಲ್ಲದೆ ಎದುರಾಳಿಗಳ ಮೇಲೆ ಮಾನಸಿಕ ಯುದ್ಧ ಹೇರಿ ಗೆಲ್ಲುತ್ತಾರೆಂದರೆ ಅದನ್ನೂ ಮಾಡಲಿ. ಯಾವುದೇ ಹಿಂಜರಿಕೆ ಬೇಡ” ಎಂದು ಟೀಂ ಇಂಡಿಯಾದ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ತಮ್ಮ ಹುಡುಗರಿಗೆ ಹೇಳಿದ್ದಾರೆ.
ಈ ಮೂಲಕ ಮತ್ತೊಮ್ಮೆ ಆಸೀಸ್ ಸರಣಿಯಲ್ಲಿ ಮಾತಿನ ಸಮರವೂ ಜೋರಾಗಿ ನಡೆಯಲಿರುವ ಸೂಚನೆ ನೀಡಿದ್ದಾರೆ. ನಾಳೆಯಿಂದ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ ಆಡಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ